ಕಾಂಗ್ರೆಸ್ ಜಗತ್ತಿನಲ್ಲಿ 2ನೆ ಅತ್ಯಂತ ಭ್ರಷ್ಟ ಪಕ್ಷವೇ?: ಇಲ್ಲಿದೆ ವೈರಲ್ ಸುದ್ದಿಯ ಹಿಂದಿನ ಸತ್ಯಾಂಶ

Update: 2018-09-18 17:31 GMT

‘ಜಗತ್ತಿನ ಅತ್ಯಂತ ಭ್ರಷ್ಟ ಪಕ್ಷಗಳು’ ಎನ್ನುವ ತಲೆಬರಹದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಕಾಂಗ್ರೆಸ್ 2ನೆ ಸ್ಥಾನದಲ್ಲಿದೆ ಎಂದು ಹೇಳಲಾಗಿದ್ದು, ಬಿಜೆಪಿ ಬೆಂಬಲಿಗರು ಈ ಸುದ್ದಿಯನ್ನು ಶೇರ್ ಮಾಡುತ್ತಿದ್ದಾರೆ.

ಸೋಮವಾರ ಈ ಸುದ್ದಿಯನ್ನು ಆರಿನ್ ಕ್ಯಾಪಿಟಲ್ ನ ಚೇರ್ ಮೆನ್ ಟಿ.ವಿ. ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಆದರೆ ನಂತರ ಡಿಲಿಟ್ ಮಾಡಿದ್ದರು. ಆದರೆ ಈ ಇಬ್ಬರೂ ಶೇರ್ ಮಾಡಿದ್ದ ಸುದ್ದಿಯ ಲಿಂಕ್ ನಕಲಿಯಾಗಿತ್ತು ಮತ್ತು ಬಿಬಿಸಿಯಂತೆಯೇ ಕಾಣುತ್ತಿದೆ. ಆದರೆ ಈ ಸುದ್ದಿಯನ್ನು ಪ್ರಕಟಿಸಿದ bbcnewshub.comಗೂ ಬಿಬಿಸಿಗೂ ಯಾವುದೇ ಸಂಬಂಧವಿಲ್ಲ.

ಇದೇ ವೆಬ್ ಸೈಟ್ ಈ ಹಿಂದೆ ಜಗತ್ತಿನ ಅತೀ ಭ್ರಷ್ಟ ಪ್ರಧಾನಿಗಳು ಎಂದು ಪಟ್ಟಿಯೊಂದನ್ನು ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 7 ನೆ ಸ್ಥಾನದಲ್ಲಿದ್ದರು. ಇದಕ್ಕೂ ಮೊದಲು 2017ರಲ್ಲಿ ಈ ವೆಬ್ ಸೈಟ್ ಜಗತ್ತಿನಲ್ಲಿ ಅತೀ ಭ್ರಷ್ಟ ಪಕ್ಷಗಳ ಪಟ್ಟಿಯನ್ನು ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಕಾಂಗ್ರೆಸ್ 4ನೆ ಸ್ಥಾನದಲ್ಲಿದೆ ಎಂದು ಹೇಳಿತ್ತು. ಈ ವೆಬ್ ಸೈಟ್ ಬಗ್ಗೆ ಈ ಹಿಂದೆ Hoaxslayer ವರದಿ ಪ್ರಕಟಿಸಿದ್ದು, ಈ ಪಟ್ಟಿಗಳಲ್ಲಿ ಯಾವುದೇ ವಿಧಾನವಾಗಲೀ, ಮಾಹಿತಿ ಸಂಗ್ರಹವಾಗಲೀ ಅಥವಾ ಈ ಪಟ್ಟಿಗೆ ಮಾನದಂಡವಾಗಲೀ ಇಲ್ಲ ಎಂದಿತ್ತು. ಸುಳ್ಳು ಸುದ್ದಿ ಪ್ರಕಟಿಸುವ ವೆಬ್ ಸೈಟ್ ಎಂದೂ ಹೇಳಿತ್ತು.

ಈ ಹಿಂದೆ ಟ್ವೀಟ್ ಮಾಡಿದ್ದ ಬಿಬಿಸಿ ಭಾರತದ ಆನ್ ಲೈಸ್ ಸಂಪಾದಕಿ ಗೀತಾ ಪಾಂಡೆ ಬಿಬಿಸಿ ಹೆಸರಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಈ ವೆಬ್ ಸೈಟ್ ವಿರುದ್ಧ ಕಿಡಿಕಾರಿದ್ದರು. ಬಿಬಿಸಿ ನ್ಯೂಸ್, ಬಿಬಿಸಿ ಇಂಡಿಯಾ, ಬಿಬಿಸಿ ನ್ಯೂಸ್ ಏಷ್ಯಾ ಇಂತಹ ನಕಲಿ ಸಮೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News