ಮಂಗಳೂರು: ಅಂತಾರಾಷ್ಟ್ರೀಯ ಅತ್ಲೀಟ್ ಪೂವಮ್ಮಗೆ ಸನ್ಮಾನ

Update: 2018-09-19 13:04 GMT

ಮಂಗಳೂರು, ಸೆ.19: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಅಂತಾರಾಷ್ಟ್ರೀಯ ಅತ್ಲೀಟ್ ಎಂ.ಆರ್. ಪೂವಮ್ಮ ಅವರನ್ನು ಕೆನರಾ ಹೈಸ್ಕೂಲ್ ಎಸೋಸಿಯೇಶನ್ ವತಿಯಿಂದ ಪ್ರೌಢಶಾಲೆಯಲ್ಲಿ ಸನ್ಮಾನಿಸಲಾಯಿತು.

ಎಂ. ಆರ್. ಪೂವಮ್ಮ ಕೆನರಾ ಪ್ರೌಢಶಾಲೆ ಉರ್ವಾದ ಹಳೆ ವಿದ್ಯಾರ್ಥಿನಿಯಾಗಿದ್ದು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಪಡೆದ ಗೌರವಾರ್ಥ ಸನ್ಮಾನವನ್ನು ಏರ್ಪಡಿಸಲಾಯಿತು.

ಮಂಗಳ ಕ್ರೀಡಾಂಗಣದಿಂದ ಕೆನರಾ ಪ್ರೌಢಶಾಲೆ ಉರ್ವಾದವರೆಗೆ ಭವ್ಯ ಮೆರವಣಿಗೆಯಲ್ಲಿ ಸಾಗಿ, ಶಾಲೆಯ ಮಿಜಾರ್ ಗೋವಿಂದ ಪೈ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿ ಗೌರವಿಸಿತು.

ಎಂ. ಆರ್. ಪೂವಮ್ಮ ಮಾತನಾಡಿ, ಬದುಕನ್ನು ರೂಪಿಸಿಕೊಳ್ಳಲು ಪಠ್ಯೇತರ ಚಟುವಟಿಕೆಯಿಂದಲೂ ಸಾಧ್ಯವಿದ್ದು, ಶಾಲಾ ಕಾಲೇಜುಗಳು ಇದಕ್ಕೆ ಪೂರಕವಾದ ವಾತಾವರಣ ಒದಗಿಸಿಕೊಡಬೇಕು ಎಂದರು.

ಕೆನರಾ ಹೈಸ್ಕೂಲ್ ಎಸೋಸಿಯೇಶನ್‌ನ ಉಪಾಧ್ಯಕ್ಷ ಅಣ್ಣಪ್ಪ ಪೈಯವರು ಅಭಿನಂದಿಸಿ ಶುಭ ಹಾರೈಸಿದರು. ಕೆನರಾ ಹೈಸ್ಕೂಲ್ ಎಸೋಸಿಯೇಶನ್‌ನ ಗೌರವ ಕಾರ್ಯದರ್ಶಿಗಳಾದ ರಂಗನಾಥ್ ಭಟ್ ಪ್ರಾಸ್ತಾವಿಕಾಗಿ ಮಾತನಾಡಿದರು.

ಕೆನರಾ ಹೈಸ್ಕೂಲ್ ಎಸೋಸಿಯೇಶನ್‌ನ ಅಧ್ಯಕ್ಷ ಎಸ್. ಎಸ್. ಕಾಮತ್, ಶಾಲೆಯ ಸಂಚಾಲಕರಾದ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ಕೊಚ್ಚಿಕಾರ್ ಸುಧಾಕರ್ ಪೈ, ಬಸ್ತಿ ಪುರುಷೋತ್ತಮ ಶೆಣೈ, ಕೆ. ಸುರೇಶ್ ಕಾಮತ್, ಎಂ.ಗಣೇಶ್ ಕಾಮತ್, ಶ್ರೀಕಾಂತ್ ಪೈ, ಮುಖ್ಯೋಪಾಧ್ಯಾಯಿನಿಯರಾದ ಅರುಣ ಕುಮಾರಿ, ಲಲನಾ ಜೆ ಶೆಣೈ ಉಪಸ್ಥಿತರಿದ್ದರು.

ಕೆನರಾ ಹಿ. ಪ್ರಾ. ಶಾಲೆ ಡೊಂಗರಕೇರಿಯ ಸಂಚಾಲಕರಾದ ಬಸ್ತಿ ಪುರುಷೋತ್ತಮ ಶೆಣೈಯವರು ವಂದಿಸಿದರು. ಶಾಲಾ ಶಿಕ್ಷಕರಾದ ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News