ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗಾಗಿ ಚಿತ್ರಕಲಾ ಪ್ರದರ್ಶನ

Update: 2018-09-19 17:40 GMT

ಉಡುಪಿ, ಸೆ.19: ಮಣಿಪಾಲ ತ್ರಿವರ್ಣ ಕಲಾ ಕೇಂದ್ರವು ಉಡುಪಿ ಜಿಲ್ಲಾ ಡಳಿತದ ಸಹಯೋಗದೊಂದಿಗೆ ಚಿತ್ರಕಲಾ ಪ್ರದರ್ಶನದ ಮೂಲಕ ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ 39 ವಿದ್ಯಾರ್ಥಿಗಳು ರಚಿಸಿರುವ 39 ಗೋವಿನ ಕಲಾಕೃತಿಗಳ ಪ್ರದರ್ಶನ ‘ಗೋ ನಿಧಿ’ಯನ್ನು ಏರ್ಪಡಿಸಲಾಗಿದೆ.

ಭಾವನಾತ್ಮಕವಾದ ನಿಲುವಿನೊಂದಿಗೆ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಸ್ಥಾನ ಹೊಂದಿರುವ ಗೋವಿನ ಕುರಿತ ಕಲಾಕೃತಿಗಳನ್ನು ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಡಿಯಲ್ಲಿ ಕೇಂದ್ರದ ಕುಂದಾಪುರ ಹಾಗೂ ಮಣಿಪಾಲದ ವಿದ್ಯಾರ್ಥಿಗಳು ತಮ್ಮದೇ ದೃಷ್ಟಿಕೋನದ ಅನೆ್ವೀಷಣೆಯಲ್ಲಿ ವಿಶಿಷ್ಟವಾಗಿ ರಚಿಸಿದ್ದಾರೆ.

ಮಿಶ್ರ ಮಾಧ್ಯಮದ ಕಲಾಕೃತಿಗಳು: ಕುಂದಾಪುರ ಮತ್ತು ಮಣಿಪಾಲದ 39 ವಿದ್ಯಾರ್ಥಿಗಳು ತಮ್ಮದೆ ಆದ ಅಭಿವ್ಯಕ್ತಿಯಲ್ಲಿ ನಾನಾ ಸ್ವರೂಪಗಳನ್ನು ಗೋನಿಧಿ ಶೀರ್ಷಿಕೆಯಡಿ ರಚಿಸಿರುವ 39 ಕಲಾಕೃತಿಗನ್ನು ಇಲ್ಲಿ ಪ್ರದರ್ಶಿಸ ಲಾಗುತ್ತದೆ.

ಅಕ್ರಾಲಿಕ್-ಕ್ಯಾನ್ವಾಸ್ ಮಾಧ್ಯಮದಲ್ಲಿ ತಾಯಿ ಮಮತೆ, ನೇಚರ್ಸ್‌ ರಿಪ್ಲೆಕ್ಷನ್, ಗೃಹ ಪ್ರವೇಶ, ಅರ್ಲಿ ಮಾರ್ನಿಂಗ್, ಟ್ರೈಬಲ್ ಫಾರ್ಮ್, ಗೋತೀರ್ಥ, ಭಕ್ತಿ, ಕಲರ್‌ಫುಲ್ ಕಲ್ಚರ್, ಜಲವರ್ಣ ಮಾಧ್ಯಮದಲ್ಲಿ ಗೋಮುಖ, ಇನ್ನರ್ ವ್ಹೀವ್, ಗೋ-ಪೂಜಾ, ಪ್ಯಾಮಿಲಿ ಲೈಫ್, ಆಯ್ಲಾ ಕಂಟೈನರ್, ಕೃಷಿ, ಲೆದರ್ ಮುಖವಾಡ, ಗ್ಲೋಬಲ್ ಗ್ರೀನ್, ಅಮಾನವೀಯತೆ, ಗೋ ಕುಟುಂಬ, ಗೋ ಮಿತ್ರ, ಟುಢೇಸ್ ಲೈಫ್, ಗೋಮಯ, ಗೋವರ್ಣ, ಇನ್ ಟೆಂಪಲ್, ಚಾರ್ಕೋಲ್ ಮಾಧ್ಯಮದಲ್ಲಿ ಶಿವ ಸಾನಿಧ್ಯ, ಬ್ರೇವರಿ, ದಿ ಸ್ಟ್ಯಾಚ್ಯು, ಟ್ರಾನ್ಸ್ ಪೋರ್ಟರ್, ಪುಣ್ಯಕೋಟಿ, ಬ್ರೋಕನ್ ಇಮೇಜ್, ಇನ್ಕಂ, ಗೋ ಪಾಲಕ, ಗೋ ಮಾತಾ, ನೀರ ವೇದನೆ, ಹ್ಯಾಪಿ ಮೂಮೆಂಟ್, ಗೋಪಾಲನೆ, ಎ ಹೋಲಿ ವಿಶ್ಹನ್, ಅರ್ಥೆನ್ ಶವರ್ಸ್‌, ಹಿತ್ತಲ ನೋಟಗಳ ಪರಿಕಲ್ಪನೆಯಲ್ಲಿ ಕಲಾ ಕೃತಿಗಳು ಮೂಡಿಬಂದಿವೆ.

ಪ್ರದರ್ಶನದ ಉದ್ಘಾಟನೆ: ಮಣಿಪಾಲ ಆರ್.ಎಸ್.ಬಿ. ಭವನದಲ್ಲಿ ಸೆ.21ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗ ಳೂರು ನಗರ ಪಾಲಿಕೆಯ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಮಾಧವ ಕೃಪಾ ಶಾಲೆಯ ಪ್ರಾಂಶುಪಾಲೆ ಜೆಸ್ಸೀ ಆಂಡ್ರಿವ್ಸ್, ಮಣಿಪಾಲ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶ್ರುತಿ ಶೆಣೈ ಭಾಗವಹಿಸಲಿರುವರು.

ಅಕ್ರಾಲಿಕ್- ಕ್ಯಾನ್ವಾಸ್, ಜಲವರ್ಣ ಹ್ಯಾಂಡ್ ಮೇಡ್ ಪೇಪರ್ ಮತ್ತು ಚಾರ್ಕೋಲ್-ಐವರಿ ಪೇಪರ್ ಸೇರಿದಂತೆ ಮಿಶ್ರ ಮಾಧ್ಯಮದಲ್ಲಿ ರಚಿಸಿರುವ ಈ ಕಲಾಕೃತಿಗಳ ಪ್ರದರ್ಶನವು ಸೆ.21ರಿಂದ ಸೆ.23ರವರೆಗೆ ಬೆಳಗ್ಗೆ 10ರಿಂದ ಸಂಜೆ 6:30ರ ತನಕ ನಡೆಯಲಿದ್ದು, ಸಾರ್ವಜನಿಕರಿಗೆ ಮ ುಕ್ತ ಅವಕಾಶ ಕಲ್ಪಿಸ ಲಾಗಿದೆ.

ಮಕ್ಕಳಿಂದ ರಚಿತವಾದ ಈ ಕಲಾಕೃತಿಗಳನ್ನು ಮಾರಾಟ ಮಾಡಿ, ಅದರಿಂದ ಸಂಗ್ರಹವಾದ ಹಣವನ್ನು ಜಿಲ್ಲಾಡಳಿದ ಮೂಲಕ ಮುಖ್ಯಮಂತ್ರಿ ಪರಿಹಾ ನಿಧಿಗೆ ಒಪ್ಪಿಸಿ, ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಮಾಡಲಾಗುವುದು ಎಂದು ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮತ್ತು ಸಮಾಜದ ಹಿತದೃಷ್ಟಿಯಿಂದ ಒಂದೇ ಶೀರ್ಷಿಕೆಯಡಿ ಯಲ್ಲಿ ಮೂಡಿಬರುವ 15ನೇ ಕಲಾ ಪ್ರದರ್ಶನ ಇದಾಗಿದ್ದು, ಪ್ರತಿಯೊಂದು ಕಲಾಕೃತಿಗಳು ತನ್ನದೇ ಆಯಾಮ ಮತ್ತು ಶೈಲಿಯ ಚಿತ್ರಣವನ್ನು ಹೊಂದಿದೆ. ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದರೊಂದಿಗೆ, ಜನ ಸಾಮಾನ್ಯರಿಗೆ ಸಂದೇಶವನ್ನು ಸಾರಿ ಕಡಿಮೆ ಬೆಲೆಗೆ ಕಲಾಕೃತಿಗಳನ್ನು ಮಾರಾಟ ಮಾಡಲಾಗುವುದು. ಈ ಮೂಲಕ ನಿಧಿ ಸಂಗ್ರಹಿಸಿ ಕೊಡಗು ಜಿಲ್ಲೆಗೆ ನೀಡುವ ಅಳಿಲ ಸೇವೆಯ ಪ್ರಯತ್ನ ನಮ್ಮದ್ದಾಗಿದೆ.

-ಹರೀಶ್ ಸಾಗಾ, ಮಾರ್ಗದರ್ಶಕ, ತ್ರಿವರ್ಣ ಕಲಾ ಕೇಂದ್ರ, ಮಣಿಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News