ಸೀನಿಯರ್ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆ: ಕುಂದಾಪುರದ ಸುಪ್ರಿತಾ ವೈದ್ಯಗೆ ಅಗ್ರ ಪ್ರಶಸ್ತಿ

Update: 2018-09-19 14:46 GMT

ಉಡುಪಿ, ಸೆ.19: ಉಡುಪಿಯ ಹೆಜ್ಜೆಗೆಜ್ಜೆ ಪ್ರತಿಷ್ಠಾನದ ರಜತ ಮಹೋತ್ಸವ ಅಂಗವಾಗಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಸೀನಿಯರ್ ಭರತನಾಟ್ಯ ಸ್ಪರ್ಧೆಯಲ್ಲಿ ಕುಂದಾಪುರ ವಸಂತ ನಾಟ್ಯಾಲಯದ ನೃತ್ಯ ಗುರು ಪ್ರವೀತಾ ಅಶೋಕ್‌ರ ಶಿಷ್ಯೆ ಸುಪ್ರಿತಾ ವೈದ್ಯ ಅವರು ಅಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭರತನಾಟ್ಯವು ದೇಹದ ಎಲ್ಲ ಭಾಗಗಳೂ ಕ್ರಿಯಾಶೀಲವಾಗುವಂತೆ ಪ್ರೇರೇಪಿಸುವ ದೇವರಿಗೂ ಪ್ರಿಯವಾದ ಪ್ರಾಚೀನ ಕಲೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಎಂ.ಡಿ.ಗಣೇಶ್, ಹೆಜ್ಜೆಗೆಜ್ಜೆ ಸಂಸ್ಥೆಯ ನಿರ್ದೇಶಕಿ ಯಶಾ ರಾಮಕೃಷ್ಣ, ಉಪಾಧ್ಯಕ್ಷ ಡಾ.ರಾಮಕೃಷ್ಣ ಹೆಗ್ಡೆ ಉಪಸ್ಥಿತ ರಿದ್ದರು. ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿವಿದ್ವಾನ್ ಪ್ರಮೋದ್ ಉಳ್ಳಾಲ್ ಮಂಗಳೂರು, ಡಾ. ಶ್ರೀವಿದ್ಯಾ ಮುರಳೀಧರ್ ಮಂಗಳೂರು, ವಿದ್ವಾನ್ ಸಾಗರ್ ಟಿ. ಎಸ್. ತುಮಕೂರು ಕಾರ್ಯನಿರ್ವಹಿಸಿದರು.

ಸ್ಪರ್ಧೆಯ ವಿಜೇತರ ವಿವರ

ಪ್ರಥಮ ಬಹುಮಾನ: ಸುಪ್ರಿತಾ ವೈದ್ಯ, ಕುಂದಾಪುರ ವಸಂತ ನಾಟ್ಯಾಲಯ, ನೃತ್ಯ ಗುರು-ಪ್ರವೀತಾ ಅಶೋಕ್. ದ್ವಿತೀಯ ಬಹುಮಾನ: ಶ್ವೇತ ಎಸ್ ರಾವ್, ಮಂಗಳೂರಿನ ಗಾನ ನೃತ್ಯ ಅಕಾಡೆಮಿ, ನೃತ್ಯ ಗುರು- ವಿದ್ಯಾಶ್ರೀ ರಾಧಾಕೃಷ್ಣನ್. ತೃತೀಯ ಬಹುಮಾನ: ಪ್ರಿಯಾಂಜಲಿ ರಾವ್, ಮುಂಬಯಿಯ ನೃತ್ಯಂಜಲಿ ಫೈನ್ ಆರ್ಟ್ಸ್ ಅಕಾಡೆಮಿ, ನೃತ್ಯ ಗುರು-ರೇವತಿ ಶ್ರೀನಿವಾಸ್ ರಾಘವನ್.

ಸಮಾಧಾನಕರ ಬಹುಮಾನಗಳು: 1.ಮೈತ್ರಿ, ಕುಂದಾಪುರದ ವಸಂತ ನಾಟ್ಯಾಲಯ. 2.ಪ್ರಭು ಕೆ., ದಕ್ಷಿಣ ಕನ್ನಡದ ಕಲಾನಿಕೇತನ. 3. ಸ್ವಾತಿ ಕೆ., ಬೆಂಗಳೂರಿನ ಕಾಲ ಸಿಂಧು ಅಕಾಡೆಮಿ ಆಫ್ ಡ್ಯಾನ್ಸ್ ಆಂಡ್ ರಿಲೇಟೆಡ್ ಆರ್ಟ್ಸ್. 4.ಶ್ರೀಸನ್ನಿಧಿ, ಮಂಗಳೂರಿನ ನಾದ ನೃತ್ಯಕಲಾ. 5. ತ್ವಿಷಾ ಆರ್ ಶೆಟ್ಟಿ, ಮಂಗಳೂರಿನ ಗಾನ ನೃತ್ಯ ಅಕಾಡೆಮಿ. 6.ಡಿ.ರಕ್ಷಾ, ಚನ್ನೈನ ಇಂಡಿಷಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News