ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ: 379.11 ಕೋಟಿ ವ್ಯವಹಾರ

Update: 2018-09-19 15:01 GMT

ಉಳ್ಳಾಲ, ಸೆ. 19: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು 2017-18 ನೇ ಸಾಲಿನಲ್ಲಿ ಸಂಘದ 62 ವರ್ಷಗಳ ಇತಿಹಾಸದಲ್ಲಿ ಗರಿಷ್ಠ  379.11ಕೋಟಿ ರೂ. ಗಳ ವ್ಯವಹಾರವನ್ನು ನಡೆಸಿ  1.40 ಕೋಟಿ ನಿವ್ವಳ ಲಾಭಾಂಶ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ. ಎ. ಮಹಮ್ಮದ್ ಬಶೀರ್  ತಿಳಿಸಿದರು.

ಅವರು  ಸಂಘದ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವರದಿ ಸಾಲಿನಲ್ಲಿ ಸಂಘವು "ಎ" ತರಗತಿಯ 9304 ಸದಸ್ಯರಿಂದ 1.48 ಕೋಟಿ ರೂಗಳ ಪಾಲು ಬಂಡವಾಳವನ್ನು ಹೊಂದಿರುತ್ತೇವೆ. ಪ್ರಸ್ತುತ ಸಾಲಿನಲ್ಲಿ 171.63 ಕೋಟಿ ಠೇವಣಿ ಸಂಗ್ರಹವಾಗಿದ್ದು,  171.68 ಕೋಟಿ ಠೇವಣಿದಾರರಿಗೆ ಹಿಂದಕ್ಕೆ ನೀಡಿ ವರ್ಷಾಂತ್ಯಕ್ಕೆ  86.96 ಕೋಟಿ ಠೇವಣಿಯನ್ನು ಹೊಂದಿರುತ್ತದೆ ಎಂದರು.

ಸಾಲ :- ಈ ಸಾಲಿನಲ್ಲಿ 86.92 ಕೋಟಿ ಸಾಲ ವಿತರಿಸಿದ್ದು, 81.32 ಕೋಟಿ ಸಾಲ ವಸೂಲಿಯಾಗಿರುತ್ತದೆ. ವರ್ಷಾಂತ್ಯಕ್ಕೆ 60.16 ಕೋಟಿ ಹೊರ ಬಾಕಿ ಸಾಲವಿರುತ್ತದೆ. ಸಾಲ ವಸೂಲಾತಿಯಲ್ಲಿ ಶೇ. 95% ಪ್ರಗತಿಯನ್ನು ಸಾಧಿಸಲಾಗಿದೆ. ಸಂಘದ ಅಡಿಟ್ ವರ್ಗೀಕರಣ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ "ಎ" ತರಗತಿಯನ್ನು ಪಡೆದಿದೆ.

ವಿನಿಯೋಗ :-ಸಂಘವು ವಿವಿಧ ಹಣಕಾಸು ಸಂಸ್ಥೆಗಳಲ್ಲಿ 34.26 ಕೋಟಿ ರೂಗಳನ್ನು ಠೇವಣಿಯಾಗಿ ವಿನಿಯೋಗಿಸಿರುತ್ತೇವೆ. ಸಂಘವು ನಿರಂತರವಾಗಿ ಹಲವು ವರ್ಷಗಳಿಂದ ತನ್ನ ಷೇರುದಾರರಿರಿಗೆ ಶೇ 25% ಡಿವಿಡೆಂಡ್ ನೀಡುತ್ತ ಬಂದಿರುತ್ತೇವೆ. ಈ ಬಾರಿಯೂ ಶೇ 25% ಡಿವಿಡೆಂಡು ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಂಜೂರಾತಿಗಾಗಿ22-09-2018 ರಂದು ನಡೆಯುವ ಮಹಾಸಭೆಯ ಮುಂದೆ  ಮಂಡಿಸಲಾಗುವುದು. ಜಿಲ್ಲೆಯಲ್ಲಿಯೇ ಷೇರುದಾರ ಸದಸ್ಯರಿಗೆ ಶೇ 25% ಡಿವಿಡೆಂಡ್ ನೀಡುವ ಏಕೈಕ ಸಂಘ ನಮ್ಮದಾಗಿರುತ್ತದೆ ಎಂದರು.

ಸಂಘವು 2017-18 ನೇ ಸಾಲಿನಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹ ಬಹುಮಾನವನ್ನು ಪಡೆದಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಪದ್ಮಾವತಿ ಎಸ್. ಶೆಟ್ಟಿ, ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್‍ಕುಮಾರ್ ಉಳ್ಳಾಲ್, ಗಣೇಶ್ ಶೆಟ್ಟಿ "ರಕ್ಷ" ತಲಪಾಡಿ, ಕೆ ಬಿ ಅಬುಸಾಲಿ, ನಾರಾಯಣ ತಲಪಾಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೇಣುಗೋಪಾಲ ಯು., ಸಹಾಯಕ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರಸಾದ್ ಮಡ್ಯಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News