ಸೆ. 21: ಲಕುಮಿ ತಂಡದಿಂದ 'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರ ತೆರೆಗೆ

Update: 2018-09-19 15:27 GMT

ಮಂಗಳೂರು, ಸೆ.19 :ಲಕುಮಿ ಸಿನಿಕ್ರೀಯೇಶನ್ಸ್ ಮೂಲಕ ಲಯನ್ಸ್ ಕಿಶೋರ್ ಡಿ ಶೆಟ್ಟಿ ಅರ್ಪಿಸುವ ಶ್ರೀ ದುರ್ಗಾ ಎಂಟರ್‌ಟೈನ್ ಮೆಂಟ್‌ನ ರೋಹನ್ ಶೆಟ್ಟಿ ಮತ್ತು ರವಿ ಕಳಸರವರ ಮೂಲಕ ನಿರ್ಮಾಣ ಗೊಳ್ಳುತ್ತಿರುವ ಚಲನ ಚಿತ್ರ ಮೈ ನೇಮ್ ಈಸ್ ಅಣ್ಣಪ್ಪ ಸೆ.21ರಂದು ನಗರದಲ್ಲಿನ ಜ್ಯೋತಿ ಚಿತ್ರ ಮಂದಿರದ ಮೂಲಕ ತೆರೆ ಕಾಣಲಿದೆ ಎಂದು ಲಕುಮಿ ಸಿನಿಕ್ರೀಯೇಶನ್‌ನ ಸಂಸ್ಥಾಪಕ ಕಿಶೋರ್ ಡಿ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪಿಲಿಬೈಲ್ ಯಮುನಕ್ಕ ಖ್ಯಾತಿಯ ಕಿಶೋರ್ ಕುಮಾರ್ ಶೆಟ್ಟಿಯವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.ಚಲನ ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಖ್ಯಾತ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ,ದಿನೇಶ್ ಅಮ್ಮಣ್ಣಾಯ,ರವಿಚಂದ್ರ ಕನ್ನಡಿ ಕಟ್ಟೆ ಸೇರಿದಂತೆ ವಿಜಯ ಪ್ರಕಾಶ್, ರಘು ದೀಕ್ಷಿತ್, ಪ್ರಕಾಶ್ ಮಹಾದೇವನ್ , ಮಂಜು ಶ್ರೀ, ಕಾರ್ತಿಕೇಯ ರೂಪಾ, ಪ್ರಕಾಶ್ ಮೊದಲಾದವರು ಹಾಡಿದ್ದಾರೆ.

ನರೇಂದ್ರ ಗೌಡ ಮತ್ತು ವಿಕ್ರಮ್ ರೈ ಛಾಯಾಗ್ರಹಣ ಕೆ.ಎಮ್.ಕೆ ಕಾರ್ತಿಕ್‌ರವರ ಚಿತ್ರ ಸಂಕಲನ ಮಾಡಿದ್ದಾರೆ.ಮಂಗಳೂರು,ಮೂಡುಬಿದಿರೆ,ಮುಲ್ಕಿ,ಕಳಸ ಪರಿಸರದಲ್ಲಿ 40 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಇದು ಒಂದು ಹಾಸ್ಯ ಹಾಗೂ ಥ್ರೀಲ್ಲರ್ ಚಿತ್ರವಾಗಿದ್ದು ಸಂಪೂರ್ಣ ಮನೋರಂಜನೆಯಿಂದ ಕೂಡಿದ್ದು, ತಾಂತ್ರಿಕವಾಗಿ ಉತ್ತಮ ಗುಣ ಮಟ್ಟದ್ದಾಗಿದೆ. ತಾರಾಗಣದಲ್ಲಿ ಮಂಜು ರೈ ಮೂಳೂರು,ಶುಭ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಸತೀಶ್ ಬಂದಲೆ, ಉಮೇಶ್ ಮಿಜಾರ್, ಸಾಯಿಕೃಷ್ಣ, ಶ್ರದ್ಧಾ ಸಾಲ್ಯಾನ್,ಮೋಹನ್ ಕೊಪ್ಪಳ, ಗೋಪಿನಾಥ್ ಭಟ್, ರಮೇಶ್ ರೈ ಕುಕ್ಕುಳ್ಳಿ, ಚೇತನ್‌ರ ಮಾಣಿ, ಬಂಟ್ವಾಳ ಜಯರಾಮ ಆಚಾರ್ಯ, ದಿನೇಶ್ ಕೋಡಪದವು, ಮಂಗೇಶ್ ಭಟ್ ವಿಟ್ಲ ಮೊದಲಾದ ಕಲಾವಿದರು ಅಭಿನಯಿಸಿರುವುದು ವಿಶೇಷ, ಹಂಚಿಕೆ ದಾರರಾಗಿ ಪ್ರಶಾಂತ್ ಕಾಮತ್, ಮೋಹನ್ ಕೊಪ್ಪಳ, ಸಾರ್ವಜನಿಕ ಸಂಪರ್ಕ ಪ್ರತಿನಿಧಿಯಾಗಿ ಜಗನ್ನಾಥಶೆಟ್ಟಿ ಬಾಳ, ಸಹಾಯಕ ನಿರ್ದೇಶಕರಾಗಿ ಸಂದೀಪ್ ಬಾರಾಡಿ,ಶಿವು ಉಜಿರೆ, ರಂಜಿತ್ ಕುಡ್ಲ, ಗಿತೇಶ್ ಮಾಡೂರು ಇದ್ದಾರೆ.

ಕಲಾ ನಿರ್ದೇಶಕರಾಗಿ ಚಂಚಲ ಭಟ್,ಮಹೇಶ್ ಎಣ್ಮೂರು,ಹರೀಶ್ ಪ್ರಚಾರ ವಿನ್ಯಾಸಕಾರರಾಗಿ ದೇವಿ ಮೊದಲಾದವರು ತಂಡದಲ್ಲಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News