ಆಳ್ವಾಸ್ ನುಡಿಸಿರಿ 2018: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಮಲ್ಲಿಕಾ ಎಸ್.ಘಂಟಿ

Update: 2018-09-19 15:13 GMT

ಮೂಡುಬಿದಿರೆ, ಸೆ.19 : ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ ಆಶ್ರಯದಲ್ಲಿ ನಡೆಯುವ 15ನೇ ವರ್ಷದ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ'ಯ ಸರ್ವಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌ಘಂಟಿ ಅವರನ್ನು ಮತ್ತು ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ’ಕರ್ನಾಟಕದರ್ಶನ- ಬಹುರೂಪಿ ಆಯಾಮಗಳು’ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ಆಳ್ವಾಸ್ ನುಡಿಸಿರಿ-2018 ಸಮ್ಮೇಳನವು ನವೆಂಬರ್ 16, 17 ಮತ್ತು 18ರಂದು ಮೂಡುಬಿದಿರೆಯ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ಕವಿ ರತ್ನಾಕರವರ್ಣಿ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಜರುಗಲಿದೆ ಎಂದರು.

'ಸಾಹಿತಿ ಡಾ.ಮಲ್ಲಿಕಾಎಸ್.ಘಂಟಿ. : ವಿಜಯಪುರಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಗಸಬಾಳು ಇವರ ಹುಟ್ಟೂರು. ಧಾರವಾಡದಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ'ವೆಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಗಳಲ್ಲಿ ಪ್ರಾಧ್ಯಾಪಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರುಡೀನ್ ಆಗಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಡಳಿತಾನುಭವವನ್ನು ಪಡೆದುಕೊಂಡವರು.ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯ ಕುಲಪತಿಗಳಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡ ಇವರು ಈಗ ಎರಡನೆಯ ಅವಧಿಗೆ ಕುಲಪತಿಗಳಾಗಿ ಮುಂದುವರಿದಿದ್ದಾರೆ. ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ಪ್ರತಿಭೆಯಾಗಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿನಿಧಿ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ,ಕಾವ್ಯಾನಂದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಯೇ ಮೊದಲಾದ ಅಸಂಖ್ಯ ಪ್ರಶಸ್ತಿಗಳು ಸಂದಿವೆ.

ಸಾಹಿತಿಡಾ. ಷ.ಶೆಟ್ಟರ್

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದ ಡಾ.ಷ.ಶೆಟ್ಟರ್ ಮೈಸೂರು ವಿಶ್ವವಿದ್ಯಾನಿಲಯದಿಂದಇತಿಹಾಸದಲ್ಲಿಐದುಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಇಂಗ್ಲೇಂಡಿನ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಇವರು ಪಡೆದಿದ್ದಾರೆ.

ಭಾರತೀಯ ಪುರಾತತ್ತ್ವ, ಕಲೆ-ಇತಿಹಾಸ, ಸಮುದಾಯಗಳ ಇತಿಹಾಸ, ತತ್ತ್ವಶಾಸ್ತ್ರ ಮತ್ತು ಶಾಸ್ತ್ರೀಯ ಭಾಷೆಗಳ ಸಾಹಿತ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಅಧ್ಯಯನ ನಿರತರು. ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿರುವ ಶೆಟ್ಟರ್‌ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದುಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ನಿರತರು.

ಪ್ರಾಧ್ಯಾಪಕರಾಗಿ, ಇನ್‌ಸ್ಟಿಟ್ಯೂಟ್ ಆಫ್‌ಇಂಡಿಯನ್‌ಆರ್ಟ್ ಹಿಸ್ಟರಿಯ ನಿರ್ದೇಶಕರಾಗಿ, ಇಂಡಿಯನ್‌ಕೌನ್ಸಿಲ್‌ಆಫ್ ಹಿಸ್ಟಾರಿಕಲ್‌ರಿಸರ್ಚ್, ನವದೆಹಲಿಯ ಗೌರವಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಪ್ರೊ.ಷ.ಶೆಟ್ಟರ್ ಪ್ರಸ್ತುತ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್‌ಎಡ್ವಾನ್ಸ್‌ಡ್ ಸ್ಟಡೀಸ್‌ನಎಮಿರೆಟಸ್ ಫ್ರೊಫೆಸರ್ ಆಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್, ಬೆಂಗಳೂರು ಹಾಗೂ ಇಂದಿರಾಗಾಂಧಿ ನ್ಯಾಶನಲ್ ಸೆಂಟರ್ ಫಾರ್‌ದ ಆರ್ಟ್ಸ್, ಸೌತ್‌ರೀಜನಿನ ಗೌರವ ನಿರ್ದೇಶಕರಾಗಿದ್ದಾರೆ.

ಸಾಹಿತ್ಯಅಕಾಡೆಮಿಯ ಭಾಷಾಭೂಷಣ ಸಮ್ಮಾನ್,ಚಾವುಂಡರಾಯ ಪ್ರಶಸ್ತಿ, ಶಂಭಾ-ಜೋಶಿ ಪ್ರಶಸ್ತಿ, ಲಲಿತಕಲಾ ವಾರ್ಷಿಕ ಪ್ರಶಸ್ತಿ, ಆಚಾರ್ಯಕುಂದಕುಂದ ಪ್ರಶಸ್ತಿಯೇ ಮೊದಲಾದಹಲವಾರುಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.

'ಶಂಗಂತಮಿಳುಗಂ ಮತ್ತುಕನ್ನಡ ನಾಡುನುಡಿ'ಖ್ಯಾತಿಯಡಾ.ಷ.ಶೆಟ್ಟರ್'ಆಳ್ವಾಸ್ ನುಡಿಸಿರಿ-2018'ನ್ನು ಉದ್ಘಾಟಿಸುತ್ತಿರುವುದುನಮಗೆಲ್ಲಾಅತೀವ ಸಂತೋಷವನ್ನುಂಟುಮಾಡಿದೆ ಎಂದು ತಿಳಿಸಿದರು.

ನಾಡು ನುಡಿಯ ಸಮ್ಮೇಳನಕ್ಕೊಂದು ಆಹ್ವಾನ

ಆಳ್ವಾಸ್ ನುಡಿಸಿರಿ 2018ರ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಪ್ರತಿನಿಧಿ ಶುಲ್ಕವಿಲ್ಲದೆ ಸಂಪೂರ್ಣಉಚಿತವಾಗಿ ಭಾಗವಹಿಸಬಹುದು.ಭಾಗವಹಿಸುವ ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರದೃಢೀಕರಣಪತ್ರವನ್ನು ಹೊಂದಿರಬೇಕು.ಇತರರಿಗೆ ಮೂರು ದಿನಗಳ ಊಟ, ವಸತಿಗಳು ಉಚಿತವಾಗಿದ್ದು ರೂ.100 ಪ್ರತಿನಿಧಿ ಶುಲ್ಕದೊಂದಿಗೆ ಸಮ್ಮೇಳನವನ್ನು ಕಣ್ತುಂಬಿಸಿಕೊಳ್ಳಬಹುದು.ಖ್ಯಾತ ಸಾಹಿತಿಗಳು, ವಿಮರ್ಶಕರು, ಸಂಶೋಧಕರು, ಕಲಾವಿದರು ಹಾಗೂ ಕನ್ನಡ ಬಾಂಧವರುಒಟ್ಟು ಸೇರುವ ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.

ಸಂಪರ್ಕಕ್ಕಾಗಿ Email : nudisiri@alvas.org

08258-261229,  ಆಳ್ವಾಸ್ ನುಡಿಸಿರಿಯ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿ.ಆರ್.ಒ ಡಾ/ಪದ್ಮನಾಭ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News