ರಂಗಭೂಮಿ 39ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

Update: 2018-09-19 16:36 GMT

ಉಡುಪಿ, ಸೆ.19: ರಾಜ್ಯದ ಖ್ಯಾತ ಹವ್ಯಾಸಿ ನಾಟಕ ಸಂಸ್ಥೆ ರಂಗಭೂಮಿ ಉಡುಪಿ ಇದೇ ಬರುವ ನ.23ರಿಂದ ಡಿ.4ರವರೆಗೆ ಡಾ.ಟಿಎಂಎ ಪೈ, ಮಲ್ಪೆಮಧ್ವರಾಜ್ ಮತ್ತು ಎಸ್.ಎಲ್.ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 39ನೇ ಕನ್ನಡ ನಾಟಕ ಸ್ಪರ್ಧೆಯನ್ನು ಉಡುಪಿಯಲ್ಲಿ ಆಯೋಜಿಸಲಿದೆ.

ಕಾಸರಗೋಡು ಸಹಿತ ಕರ್ನಾಟಕ ರಾಜ್ಯದ ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ ಒಂದು ಗಂಟೆ 30 ನಿಮಿಷ ಹಾಗೂ ಗರಿಷ್ಟ 2ಗಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಸ್ಪರ್ಧೆಗೆ ಗರಿಷ್ಠ 12 ತಂಡಗಳನು್ನ ಮಾತ್ರ ಆಯ್ಕೆ ಮಾಡಲಾಗುವುದು.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ 35,000ರೂ., 25,000ರೂ., 15,000 ರೂ. ನಗದು ಬಹುಮಾನ ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ಹಾಸ್ಯ ಪಾತ್ರಗಳಿಗೂ ನಗದು ಸಹಿತ ವೈಯಕ್ತಿಕ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಖರ್ಚು ಸೇರಿ ಕನಿಷ್ಠ 1500ರೂ.ಗಳಿಂದ ಗರಿಷ್ಠ 10,000ರೂ. ಪ್ರಯಾಣ ವೆಚ್ಚ ಮತ್ತು 5,000ರೂ. ಗೌರವ ಧನ ನೀಡಲಾಗು ವುದು.

ಪ್ರವೇಶ ಪತ್ರಗಳನ್ನು ಸ್ವೀಕರಿಸಲು ಅ.23 ಕೊನೆಯ ದಿನವಾಗಿದ್ದು, ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, ರಂಗಭೂಮಿ, ಕುತ್ಪಾಡಿ, ಉಡುಪಿ-574118 ಇವರಿಗೆ ಬರೆಯಬೇಕು. ಹೆಚ್ಚಿನ ವಿವರಗಳಿಗೆ ಮೊಬೈಲ್: 9448952847 (ಪ್ರದೀಪ್ ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷ ನಂದಕುಮಾರ್ (9980524431), ಜತೆಕಾರ್ಯದರ್ಶಿಗಳಾದ ರವಿರಾಜ್ ಹೆಚ್.ಪಿ.(9845240309), ಭಾಸ್ಕರ್ ರಾವ್ ಕಿದಿಯೂರು (9844742166) ಇವರನ್ನು ಸಂಪರ್ಕಿಸಬಹುದು ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News