ಗೋಪಿಚಂದ್ ಪುತ್ರ ಬ್ಯಾಡ್ಮಿಂಟನ್ ನಲ್ಲಿ ಉದಯೋನ್ಮುಖ ಸ್ಟಾರ್

Update: 2018-09-19 18:25 GMT

ಚಂಡೀಗಡ, ಸೆ.19: ಬ್ಯಾಡ್ಮಿಂಟನ್ ಕೋರ್ಟ್ ಸೆಕ್ಟರ್ 43ರಲ್ಲಿ ಮಂಗಳವಾರ ಆಡುತ್ತಿದ್ದ 14ರ ಹರೆಯದ ಬಾಲಕನ ಟೀ-ಶರ್ಟ್‌ನಲ್ಲಿ ಪುಲ್ಲೇಲ ಎಂದು ಬರೆದಿರುವುದು ಗಮನ ಸೆಳೆಯಿತು.

ಸಾಯಿ ವಿಷ್ಣು ಅವರು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಪುತ್ರ. ಸಾಯಿ ವಿಷ್ಣು ಅವರು ಅಂಡರ್ -19 ಪ್ರಥಮ ಅಖಿಲ ಭಾರತ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ.

ಸಾಯಿ ವಿಷ್ಣು ಅವರು ಉದಯೋನ್ಮುಖ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಂಡರ್ -19 ಪ್ರಥಮ ಅಖಿಲ ಭಾರತ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಈಗಾಗಲೇ 1,040 ಯುವ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಹಲವು ಮಂದಿ ಆಟಗಾರರು ಆಡುತ್ತಿದ್ದಾರೆ. ಈ ಪೈಕಿ ಎಲ್ಲರ ಗಮನ ಸಾಯಿ ವಿಷ್ಣು ಕಡೆಗೆ ನೆಟ್ಟಿದೆ.

ಪುರುಷರ ಅಂಡರ್ -19 ಎರಡನೇ ಅರ್ಹತಾ ಸಿಂಗಲ್ಸ್ ಪಂದ್ಯದಲ್ಲಿ ಸಾಯಿ ವಿಷ್ಣು ಅವರು ಉದಯ ಶಂಕರ್‌ಪ್ರಸಾದ್ ಅವರನ್ನು 13-15, 17-15, 15-13 ಅಂತರದಲ್ಲಿ ಸೋಲಿಸಿದರು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸಾಯಿ ವಿಷ್ಣು ಅವರು ಅವ್ಜ್ ಪಾಂಡೆ ವಿರುದ್ಧ 15-12, 15-7 ಅಂತರದಲ್ಲಿ ಜಯ ಸಾಧಿಸಿದರು.

ಮೊದಲ ಪಂದ್ಯದ ಪ್ರಥಮ ಗೇಮ್‌ನಲ್ಲಿ ಸಾಯಿ ವಿಷ್ಣು 13-15 ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಸಾಯಿ ವಿಷ್ಣು ಅಜ್ಜಿ ಪುಲ್ಲೇಲ ಸುಬ್ರವಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ ಪ್ರತಿಯೊಂದು ಪಂದ್ಯದಲ್ಲೂ ಸಾಯಿ ವಿಷ್ಣು ಅವರ ಸ್ಪರ್ಧಾ ಮಟ್ಟದಲ್ಲಿ ಸುಧಾರಣೆಯಾಗುತ್ತಿದೆ. ಮುಂದೆ ಡಬಲ್ಸ್ ಅರ್ಹತಾ ಪಂದ್ಯದಲ್ಲೂ ಆಡಲಿದ್ದಾರೆ. ಸತತ ಪಂದ್ಯಗಳನ್ನು ಆಡುತ್ತಿರುವ ಸಾಯಿ ವಿಷ್ಣು ಅಗ್ರಸ್ಥಾನದಲ್ಲಿದ್ದಾರೆ’’ ಎಂದು ಹೇಳಿದ್ದಾರೆ.

ಬುಧವಾರ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಸಾಯಿ ವಿಷ್ಣು ಪ್ರಮುಖ ಘಟ್ಟ ಪ್ರವೇಶಿಸುವ ನಿರೀಕ್ಷೆ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News