ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಚಿಕ್ಕಮಗಳೂರು, ಹಾಸನ ಘಟಕ ಕಾರ್ಯಾರಂಭ

Update: 2018-09-20 09:28 GMT

ಚಿಕ್ಕಮಗಳೂರು, ಸೆ.20: ಉದ್ಯಮಿಗಳು ಹೊಸ ಮುಖಗಳಿಗೆ ಮಾರುಕಟ್ಟೆಯನ್ನು ಪರಿಚಯಿಸುವ ಜತೆಗೆ ಬಂಡವಾಳ ಹೂಡಲು ಅವರಿಗೆ ನೆರವಾಗಬೇಕು ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ)ಅಧ್ಯಕ್ಷ ಎಸ್.ಎಂ.ರಶೀದ್‌ಹಾಜಿ ಅಭಿಪ್ರಾಯಿಸಿದ್ದಾರೆ.

ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಕ್ಕಮಗಳೂರು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಉದ್ಯಮಿಗಳ ಚೇಂಬರ್ಸ್‌ ಸಭೆಯಲ್ಲಿ ಅವರು ಮಾತನಾಡಿದರು.

ಬ್ಯಾರಿ ಜನಸಂಖ್ಯೆಯ ಶೇ.90ರಷ್ಟು ಮಂದಿ ವ್ಯಾಪಾರಿಗಳಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಲು ಬ್ಯಾರಿ ಸಮುದಾಯಕ್ಕೆ ಸಾಧ್ಯವಾಗಿದೆ. ಬ್ಯಾರಿ ವರ್ಗದ ಇನ್ನೂ ಹಲವರು ವ್ಯಾಪಾರ ಕ್ಷೇತ್ರಕ್ಕೆ ಬರುವ ಆಸಕ್ತಿ ಹೊಂದಿದ್ದಾರೆ. ಅಂತಹವರನ್ನು ಗುರುತಿಸಿ ವ್ಯಾಪಾರ ಕ್ಷೇತ್ರಕ್ಕೆ ಕರೆತರಲು ಚೇಂಬರ್ ಪ್ರಯತ್ನ ನಡೆಸುತ್ತಿದೆ ಎಂದರು.

ಬಿಸಿಸಿಐ ಸದಸ್ಯ ಮಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ ಘಟಕಗಳನ್ನು ಹೊಂದಿದೆ. ಶೀಘ್ರವೇ ದುಬೈಯಲ್ಲಿ ಘಟಕ ಸ್ಥಾಪಿಸಲು ಪದಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬ್ಯಾರಿ ಸಮುದಾಯ ಇರುವ ಎಲ್ಲ ಪ್ರದೇಶಗಳಲ್ಲೂ ಘಟಕ ಸ್ಥಾಪಿಸಿ ಉದ್ಯಮ ಕ್ಷೇತ್ರವನ್ನು ಎತ್ತರಕ್ಕೆ ಕೊಂಡೊಯ್ಯಲು ಪಣ ತೊಡಲಾಗಿದೆ ಎಂದು ರಶೀದ್ ಹಾಜಿ ತಿಳಿಸಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ.ಮಹಮದ್ ಮಾತನಾಡಿದರು. ಉದ್ಯಮಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಮಂಗಳೂರಿನ ಮುಹಮ್ಮದ್ ಇಮ್ತಿಯಾಝ್ ಉದ್ಯಮ ಕ್ಷೇತ್ರದ ಏಳುಬೀಳುಗಳನ್ನು ಪರಿಚಯಿಸಿದರು.

ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹೀಂ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಬಿಸಿಸಿಐನ ಅಬ್ದುರ್ರವೂಫ್ ಪುತ್ತಿಗೆ, ಮನ್ಸೂರ್ ಅಹ್ಮದ್, ಮುಮ್ತಾಝ್ ಅಲಿ, ಶೌಕತ್ ಶೋರಿ, ಮುಹಮ್ಮದ್ ಶರೀಫ್, ಅಬ್ದುರ್ರಝಾಕ್ ಗೋಳ್ತಮಜಲು, ಆಸಿಫ್ ಸೂಫಿಕಾನ್, ಬಿ.ಎ.ನಝೀರ್, ಖಾಲಿದ್ ತಣ್ಣೀರುಬಾವಿ, ಮುಹಮ್ಮದ್ ಹನೀಫ್, ಅಕ್ರಮ್ ಹಾಜಿ, ಬಿ.ಎಸ್.ಮುಹಮ್ಮದ್ ನಾಸಿರ್, ಎ.ಸಿ.ಅಯ್ಯೂಬ್ ಹಾಜಿ, ಕಿರುಗುಂದ ಅಬ್ಬಾಸ್, ಶರೀಫ್, ಬಿ.ಎಸ್.ನೂರ್ ಅಹ್ಮದ್, ಫಾರೂಕ್, ಇಬ್ರಾಹೀಂ, ಕೌಸರ್ ಅಬ್ದುಲ್‌ಹಾಜಿ, ಮಜೀದ್, ಜಮಾಲ್, ಫಾರೂಕ್, ಬಶೀರ್, ಇಬ್ರಾಹೀಂ, ಝಾಕಿರ್, ಅಕ್ಬರ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News