‘ಝೆಡ್ಸ್’ನಲ್ಲಿ ಅತ್ಯಾಕರ್ಷಣೆಯ ಗೃಹೋಪಯೋಗಿ ವಸ್ತುಗಳ ಸಂಗ್ರಹ

Update: 2018-09-21 11:18 GMT

ಮಂಗಳೂರು, ಸೆ.19: ನಗರದ ಝೆಡ್ಸ್ ಹೋಮ್ ಫ್ಯಾಬ್, ಝೆಡ್ಸ್ ಡಿಸೈನರ್ ಕರ್ಟನ್ಸ್, ಝೆಡ್ಸ್ ಕಾನ್ಸೆಪ್ಟ್ಸ್, ಝೆಡ್ಸ್ ರಗ್ಸ್ ಆ್ಯಂಡ್ ಕಾರ್ಪೆಟ್ಸ್ ಶೋರೂಂ ಮಳಿಗೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ, ನವೀನ ವಿನ್ಯಾಸ ಹಾಗೂ ಅತ್ಯಾಕರ್ಷಣೆಯಿಂದ ಕೂಡಿರುವ ಗೃಹೋಪಯೋಗಿ ವಸ್ತುಗಳ ಸಂಗ್ರಹವಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಮಂಗಳೂರಿನಿಂದ ಹೊರಹೋಗುವ ಅಗತ್ಯವಿಲ್ಲ. ಈಗ ಮಂಗಳೂರಲ್ಲೇ ದೊರೆಯಲಿವೆ.

ಕರ್ಟನ್ ರೇಲ್ಸ್ ಆ್ಯಂಡ್ ಬ್ಲೈಂಡ್ಸ್, ವಾಲ್ ಫ್ಯಾಬ್ರಿಕ್, ಮ್ಯಾಟ್ರೆಸ್ಸೆಸ್, ಕಾರ್ಪೆಟ್ಸ್, ಡೋರ್ ಮ್ಯಾಟ್ಸ್, ಟವಲ್ಸ್, ತಲೆದಿಂಬುಗಳು, ವುಡನ್ ಫ್ಲೋರ್ಸ್, ಬೆಡ್ ಕವರ್, ಕಂಫೋರ್ಟ್ಸ್ ಮತ್ತಿತರ ಗೃಹೋಪಯೋಗಿ ಉತ್ಪನ್ನಗಳು ಆಕರ್ಷಣೀಯ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯ ಇವೆ.

ಬ್ಲೈಂಡ್ಸ್ ಮತ್ತು ಕರ್ಟನ್ಸ್:

ಟೊಸೊ ಜಪಾನ್ ಕರ್ಟನ್ ರೇಲ್ಸ್ ಆ್ಯಂಡ್ ಬ್ಲೈಂಡ್ಸ್, ಸ್ಯಾಫ್ರೋನ್, ಆ್ಯಡ್‌ಬ್ಲೈಂಡ್ಸ್ ಹಾಗೂ ಡಿಡೆಕೋರ್ ಇಂಡಿಯಾ ಬ್ಲೈಂಡ್ಸ್ ಉತ್ಪನ್ನ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ರಿಮೋಟ್‌ನಲ್ಲಿ ಹೋಮ್ ಆಟೊಮೇಶನ್ ಕನೆಕ್ಟ್ ಮಾಡಿ ಬಳಸಬಹುದು. ಕರ್ಟನ್ಸ್‌ಗಳಲ್ಲಿ 15 ಬಗೆಯ ಬ್ರಾಂಡ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳಿವೆ. ಬ್ಲೈಂಡ್ಸ್‌ಗಳಲ್ಲಿ ಗ್ರಾಹಕರೇ ಇಚ್ಛಿಸುವ ಚಿತ್ರಗಳನ್ನು ಚಿತ್ರಿಸುವ ಸೌಲಭ್ಯವಿದೆ.

 ಬೆಡ್ಡಿಂಗ್ಸ್ ಮತ್ತು ಟವೆಲ್ಸ್:

ಬೆಡ್ಡಿಂಗ್ಸ್‌ನಲ್ಲಿ ಬೆಡ್‌ಶೀಟ್ಸ್, ಕಂಫೋಟರ್ಸ್, ಡೇ ಟೈಮ್ ಬೆಡ್ ಕವರ್, ಟವೆಲ್ಸ್, ಬಾತ್ ಮ್ಯಾಟ್ಸ್, ಜನಪ್ರಿಯ ಬ್ರಾಂಡೆಡ್ ಬೆಡ್‌ಶೀಟ್ಸ್‌ಗಳಿವೆ. ವಿವಿಧ ವಿನ್ಯಾಸಗಳ, ವಿವಿಧ ಬಗೆಯ ಬೆಡ್‌ಶೀಟ್‌ಗಳಿವೆ. ಡಿಡೆಕೋರ್, ಹೋಮ್ಸ್, ಕಾಂಚಿ, ಬಾಂಬೆ ಡೈಯಿಂಗ್ , ಮಸ್ಪರ್, ಸ್ಪೇಸಸ್, ಟ್ಯಾಂಜರಿಯನ್, ಬುಟಿಕ್ ಲಿವಿಂಗ್ ಸೇರಿದಂತೆ 15ಕ್ಕೂ ಹೆಚ್ಚು ಬ್ರಾಂಡ್‌ಗಳಿವೆ. ಬೆಡ್‌ಶೀಟ್‌ಗಳು 1,000ದಿಂದ ಮತ್ತು ಟವೆಲ್‌ಗೆ 500 ರೂ.ನಿಂದ ಪ್ರಾರಂಭವಾಗುತ್ತವೆ.

ಕಾರ್ಪೆಟ್ಸ್:

ಆಬ್ಸೆಶನ್, ಡಿಡೆಕೋರ್, ಸ್ಪೇಶಸ್, ಮೈ ಹೋಮ್ ಬ್ರಾಂಡ್‌ಗಳಲ್ಲಿ ವಿವಿಧ ನಮೂನೆಯ ಕಾರ್ಪೆಟ್ಸ್‌ಗಳಿವೆ. ಅಲ್ಲದೆ, ಹ್ಯಾಂಡ್‌ಮೇಡ್ ಕಾರ್ಪೆಟ್ಸ್‌ಗಳ ಸಂಗ್ರಹವು ಲಭ್ಯವಿದೆ. ಟರ್ಕಿ, ಬೆಲ್ಜಿಯಂ, ಇರಾನ್, ಚೀನದಿಂದ ಹಲವು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಜನರ ಅಗತ್ಯಕ್ಕೆ ತಕ್ಕಂತೆ (ಕಸ್ಟಮೈಜ್) ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಕೊಡುವ ಸೌಲಭ್ಯ ಝೆಡ್ಸ್‌ನಲ್ಲಿದೆ.

ಮ್ಯಾಟ್ರೆಸ್ಸೆಸ್:

ಭಾರತದಿಂದ ವಿದೇಶಕ್ಕೆ ರಫ್ತಾಗುವ ಸ್ಪ್ರಿಂಗ್ ಫಿಟ್ ಇಂಡಿಯನ್ ಪ್ರೀಮಿಯಂ ಬ್ರಾಂಡ್ ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ನಗರದ ಎಲ್ಲ ಮಾರುಕಟ್ಟೆಯಲ್ಲಿ ಈ ಬ್ರಾಂಡ್ ಲಭ್ಯವಿಲ್ಲ. ಆದರೆ ಝೆಡ್ಸ್ ಇದರ ಎಕ್ಸ್‌ಕ್ಲೂಸಿವ್ ಡೀಲರ್ ಆಗಿದೆ. ಅಂತರ್‌ರಾಷ್ಟ್ರೀಯ ಮಟ್ಟದ ಬ್ರಾಂಡ್‌ಗೆ ಸರಿಸಾಟಿಯಾಗಿದೆ. ಇಟಾಲಿಯನ್ ಬ್ರಾಂಡ್ ಮ್ಯಾಗ್ನಿಫ್ಲೆಕ್ಸ್‌ನ ಲಕ್ಸುರಿ ಮ್ಯಾಟ್ರೆಸ್‌ಗಳಿವೆ. ಇದು ಕಡಿಮೆ ತೂಕದಿಂದ ಕೂಡಿದ್ದು, ಮ್ಯಾಟ್ರಸ್‌ನ್ನು ಒಬ್ಬರೇ ಎತ್ತಬಹುದಾಗಿದೆ.

ಮಾರಾಟದ ನಂತರದ ಸೇವೆ (ಆಫ್ಟರ್ ಸೇಲ್ಸ್ ಸರ್ವೀಸ್):

ಕರ್ಟನ್ಸ್ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ ಗ್ರಾಹಕರನ್ನು ಝೆಡ್ಸ್ ಕಂಪೆನಿ ಎಂದೂ ಮರೆಯುವುದಿಲ್ಲ. ಉತ್ಪನ್ನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಲ್ಲಿ ದೂರವಾಣಿ ಮೂಲಕ ದೂರು ಮಾಹಿತಿ ನೀಡಿದರೆ ಕೂಡಲೇ ದುರಸ್ತಿ ಸೇವೆಯನ್ನು ನೀಡುವುದು ಝೆಡ್ಸ್ ಕಂಪೆನಿಯ ವಿಶೇಷತೆಯಾಗಿದೆ.

ಮೂರು ವರ್ಷಗಳವರೆಗೆ ಬ್ಲೈಂಡ್ಸ್‌ಗಳಲ್ಲಿ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ಉಚಿತ ಸೇವೆ ನೀಡಲು ಕಂಪೆನಿ ಬದ್ಧವಾಗಿದ್ದು, ಗ್ರಾಹಕರಿಗೆ ಯಾವುದೇ ಸೇವಾ ಶುಲ್ಕ ವಿಧಿಸುವುದಿಲ್ಲ. ಕರ್ಟನ್ಸ್ ಖರೀದಿಸಿದ ಒಂದು-ಎರಡು ವರ್ಷಗಳ ನಂತರ ಕರ್ಟನ್ಸ್ ವಾಷಿಂಗ್‌ಗಾಗಿ ಕರೆ ಮಾಡಿ ತಿಳಿಸಿದರೆ ಝೆಡ್ಸ್ ಸಿಬ್ಬಂದಿ ಸ್ವಚ್ಛಗೊಳಿಸುವುದು ಅಥವಾ ಬೇರೆಯವರೊಂದಿಗೆ ಸ್ವಚ್ಛಗೊಳಿಸಿ ಕೊಡುವ ಸೌಲಭ್ಯವನ್ನು ಕಂಪೆನಿ ನೀಡಲಿದೆ.

 *ನಗರದ ಕೆ.ಎಸ್.ರಾವ್ ರಸ್ತೆಯ ಎಕ್ಸೆಲ್ ಮಿಸ್ಚೀಫ್ ಮಾಲ್‌ನ ಮೊದಲ ಮಹಡಿಯಲ್ಲಿನ ಝೆಡ್ಸ್ ಹೋಮ್ ಫ್ಯಾಬ್, ಝೆಡ್ಸ್ ಡಿಸೈನರ್ ಕರ್ಟನ್ಸ್, ಝೆಡ್ಸ್ ಕಾನ್ಸೆಪ್ಟ್ಸ್, ಝೆಡ್ಸ್ ರಗ್ಸ್ ಆ್ಯಂಡ್ ಕಾರ್ಪೆಟ್ಸ್ ಮಳಿಗೆಗಳಲ್ಲಿ ಅತ್ಯಾಕರ್ಷಣೆಯ ಗೃಹೋಪಯೋಗಿ ವಸ್ತುಗಳು ದೊರೆಯಲಿವೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-4269904, ಮೊ. 9880539900, www.zeds.co.inನ್ನು ಸಂಪರ್ಕಿಸಬಹುದು ಎಂದು ಝೆಡ್ಸ್ ಕಂಪೆನಿಯ ಪಾಲುದಾರರಾದ ಮುಹಮ್ಮದ್ ಝುಬೈರ್, ಮುಹಮ್ಮದ್ ಝಾಹೀರ್, ಮುಹಮ್ಮದ್ ಝಾಕಿರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News