ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಆಂದೋಲನ

Update: 2018-09-20 11:53 GMT

ಕುಂದಾಪುರ, ಸೆ.20: ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ‘ಅಳಿಸಿ ಪ್ಲಾಸ್ಟಿಕ್ ಒಂದು ಪಿಡುಗು, ಉಳಿಸಿ ಪ್ರಕೃತಿ ಒಂದು ಬೆಡಗು’ ಎಂಬ ನುಡಿಯೊಂದಿಗೆ ಕೋಡಿ ಪರಿಸರದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ಪೇಪರ್ ಬ್ಯಾಗಗಳನ್ನು ಮನೆ, ಅಂಗಡಿ, ಹೋಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಾರ್ವಜನಿಕರಿಗೆ ವಿತರಿಸಲಾಯಿತು.

ಆ ಮೂಲಕ ಪ್ಲಾಸ್ಟಿಕ್ ವಿರುದ್ಧ ಜನ ಜಾಗೃತಿ ಆಂದೋಲನವನ್ನು ನಡೆಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ, ವಾಣಿಜ್ಯ ಸಂಘದ ಸಂಘಟಕ ಪ್ರೊ.ಮಾಲತಿ, ಲತಾ, ವಿದ್ಯಾಧರ ಪೂಜಾರಿ, ಹರ್ಷಿತಾ, ಕಾವ್ಯಾ, ಖಲೀಲ್ ಅಹ್ಮದ್, ವಿನಯ, ಚೈತ್ರಾ, ಶರೀಫ್ ಸಾಹೇಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News