ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಎನ್‌ಡಬ್ಲ್ಯೂಎಫ್‌ನಿಂದ ಎಸ್ಪಿಗೆ ಮನವಿ

Update: 2018-09-20 12:45 GMT

ಬ೦ಟ್ವಾಳ, ಸೆ. 20: ಗೂಡಿನಬಳಿ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎನ್‌ಡಬ್ಲ್ಯೂಎಫ್ ನಿಯೋಗವು ಗುರುವಾರ ಜಿಲ್ಲಾ ವರಿಷ್ಠಾಧಿಕಾರಿ ಅವರಿಗೆ ಮನವಿ ಮೂಲಕ ಒತ್ತಾಯಿಸಿದೆ.

ತಾಲೂಕಿನ ಗೂಡಿನಬಳಿಯಲ್ಲಿ ನಡೆದ೦ತಹ ಬಾಲಕಿಯ ಅತ್ಯಾಚಾರ ಪ್ರಕರಣವನ್ನು ವಿಮೆನ್ ಇ೦ಡಿಯಾ ಮೂಮೆ೦ಟ್ ದಕ್ಷಿಣ ಕನ್ನಡ ಜಿಲ್ಲೆ ಖ೦ಡಿಸುತ್ತಿದೆ . ದ.ಕ.ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಮರುಕಳಿಸುತ್ತಿದ್ದು. ಇಂದಿನ ಅತ್ಯಾಚಾರ ಯತ್ನ ಪ್ರಕರಣ ಅದರ ಮು೦ದುವರಿದ ಭಾಗವಾಗಿದೆ. ಅತ್ಯಾಚಾರ ಆರೋಪಿಗಳಿಗೆ ಪೊಲೀಸರು ಸಣ್ಣ ಕೇಸುಗಳನ್ನು ದಾಖಲಿಸಿ ಜಾಮೀನಿನ ಮೂಲಕ ಹೊರಬರುವುದರಿಂದ ಇ೦ತಹ ಘಟನೆಗಳು ನಡೆಯಲು ಕಾರಣವಾಗಿದೆ. ಆದ್ದರಿ೦ದ ಪೋಲೀಸ್ ಅಧಿಕಾರಿಗಳು ಈ ಘಟನೆಯನ್ನು ಗ೦ಭೀರವಾಗಿ ತೆಗೆದುಕೊ೦ಡು ಆರೋಪಿಗಳ ವಿರುದ್ಧ ಕಠಿಣ  ಮವನ್ನು ಕೈಗೊಳ್ಳಬೇಕು ಹಾಗೂ ಬಾಲಕಿಗೆ ನ್ಯಾಯವನ್ನೊದಗಿಸಿ, ಪರಿಹಾರವನ್ನು ನೀಡಬೇಕೆ೦ದು ಪೋಲಿಸ್ ವರಿಷ್ಠಾದಿಕಾಗೆ ಮನವಿಯ ಮೂಲಕ ಒತ್ತಾಯಿಸಲಾಯಿತು.

ಈ ಸಂಧರ್ಭ ನಿಯೋಗದಲ್ಲಿ ವುಮೆನ್ಸ್ ಇಂಡಿಯಾ ಮೂವ್ಮೆಂಟ್ ನ್ಯಾಷನಲ್ ಸೆಕ್ರೆಟರಿ ಶಾಹಿದಾ ತಸ್ಲೀಮ್, ಬಂಟ್ವಾಳ ಸ್ಥಳೀಯ ಕೌನ್ಸಿಲರ್ ಗಳಾದ ಝೀನತ್ ಫೈರೋಝ್, ಸಂಶಾದ್ ಗೂಡಿನಬಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News