'ಮೈ ಪೀಸ್ ಮೈ ಚಾಯ್ಸ್' ಕಿರುಚಿತ್ರ ಬಿಡುಗಡೆ

Update: 2018-09-20 14:33 GMT

ಮಂಗಳೂರು,ಸೆ.20: ಸಂದೇಶ ಸಂಸ್ಥೆಯ ನಿರ್ದೇಶಕರಾದ ವಂ. ನೆಲ್ಸನ್ ದೆಲ್ಮೆದಾರವರು ನಿರ್ಮಿಸಿದ 'ಮೈ ಪೀಸ್ ಮೈ ಚಾಯ್ಸ್'  (ನನ್ನ ಶಾಂತಿ ನನ್ನ ಆಯ್ಕೆ) ಅವ್ಯವಹಾರಿಕ ಮೌಲ್ಯಾಧಾರಿತ ಕಿರುಚಿತ್ರವನ್ನು ವಿಶ್ವ ಶಾಂತಿಯ ದಿನದ ಪಯುಕ್ತ ಸಪ್ಟೆಂಬರ್ 20 ರಂದು ಸಂತ ಅಲೋಶಿಯಸ್ ಗೊನ್ಜಾಗ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಮಂಗಳೂರಿನ ನೂತನ ಧರ್ಮಾದ್ಯಕ್ಷರಾದ ಅತೀ. ವಂ. ಪೀಟರ್ ಪಾವ್ಲ್ ಸಲ್ಡಾನ ರವರು ಬಿಡುಗಡೆಗೊಳಿಸಿದರು.

ಕಿರುಚಿತ್ರದಲ್ಲಿ ಹಿಂದೂ, ಮುಸ್ಲಿಮ್ ಹಾಗೂ ಕ್ರೈಸ್ತ ಕುಟುಂಬಗಳು ಬಹಳ ಅನ್ಯೊನ್ನತೆಯಿಂದ ಹಾಗೂ ಶಾಂತಿಯಿಂದ ಬಾಳುವುದನ್ನು ಬಿಂಬಿಸಲಾಗಿದೆ. ಈ ಕಿರು ಚಿತ್ರದಲ್ಲಿ ನಿಜವಾಗಿ ಹಿಂದೂ, ಮುಸ್ಲಿಮ್ ಹಾಗೂ ಕೈಸ್ತ ಕುಟುಂಬಗಳು ಪಾತ್ರವಹಿಸಿ ಶಾಂತಿ ನೆಮ್ಮದಿಯಿಂದ ಬಾಳಬಹುದೆಂಬ ಮುನ್ನುಡಿಯನ್ನು ಬರೆದಿವೆ. ಈ ಕಿರು ಚಿತ್ರದಲ್ಲಿ ಸಂತ ಅಲೊಶಿಯಸ್ ಗೊನ್ಜಾಗ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಝಿಶಾನ್, ಇಶಾನ್ ಶೆಟ್ಟಿ ಮತ್ತು ಇತನ್ ಪಿಂಟೊ ಪಮುಖ ಪಾತ್ರದಾರಿಗಾಳಾಗಿದ್ದಾರೆ.

ಸಂತ ಅಲೊಶಿಯಸ್ ಸಂಸ್ಥೆಯ ರೆಕ್ಟರ್ ವಂ. ಡೈನೆಶಿಯಸ್ ವಾಸ್, ಸಂತ ಅಲೊಶಿಯಸ್ ಗೊನ್ಜಾಗ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರು ವಂ. ಮೆಲ್ವಿನ್ ಮೆಂಡೊನ್ಸಾ ಹಾಗೂ ಪ್ರಾಂಶುಪಾಲೆ ಶ್ರಿಮತಿ ಗೇಸ್ ನೊರೊನ್ನಾ ರವರು ಅತಿಥಿಯಾಗಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News