ಅ.3ರಂದು ‘ಬ್ಯಾರಿ ಭಾಷಾ ದಿನ’ ಆಚರಿಸಲು ಮನವಿ

Update: 2018-09-20 18:31 GMT

ಮಂಗಳೂರು, ಸೆ.20: ರಾಜ್ಯ ಸರಕಾರವು ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು 2007ರ ಅಕ್ಟೋಬರ್ 3ರಂದು ಅಧಿಕೃತವಾಗಿ ಘೋಷಿಸಿದ ಹಿನ್ನಲೆಯಲ್ಲಿ ಅಕಾಡಮಿಯು ಅ.3ರಂದು ‘ಬ್ಯಾರಿ ಭಾಷಾ ದಿನ’ ಆಚರಿಸುತ್ತಾ ಬಂದಿದೆ.
ಬ್ಯಾರಿ ಭಾಷೆ ಮಾತನಾಡುವ ಸುಮಾರು 20 ಲಕ್ಷಕ್ಕೂ ಮೇಲ್ಪಟ್ಟ ಜನರಿದ್ದು, ಎಲ್ಲರೂ ಬ್ಯಾರಿ ಭಾಷಾ ದಿನಾಚರಣೆಯ ಸಲುವಾಗಿ ವಿವಿಧ ಬ್ಯಾರಿ ಸಂಘಟನೆಗಳ ಮತ್ತು ಶಾಲಾ ಕಾಲೇಜುಗಳ ಮೂಲಕ ಬ್ಯಾರಿ ಭಾಷೆಯಲ್ಲಿ ಪ್ರಬಂಧ, ಚುಟುಕು, ಗಾದೆ, ಓದುವ ಸ್ಪರ್ಧೆ, ಗಾಯನ ಸ್ಪರ್ಧೆ, ಬ್ಯಾರಿ ಪುಸ್ತಕ ಬಿಡುಗಡೆ, ಬ್ಯಾರಿ ಕಾವ್ಯಗಾಯನ, ಗೋಷ್ಠಿ ಮುಂತಾದ ಭಾಷಾ ಬೆಳವಣಿಗೆಗೆ ಪೂರಕವಾದ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ಬ್ಯಾರಿ ಭಾಷೆಯು ದ್ರಾವಿಡ ಭಾಷೆಗಳ ಪೈಕಿ ಒಂದು ಸ್ವತಂತ್ರ ಭಾಷೆಯಾಗಿದ್ದು ಸಮೃದ್ಧವಾಗಿದೆ. ಬ್ಯಾರಿ ಭಾಷೆಯನ್ನು ಸಾಹಿತ್ಯ ಭಾಷೆಯಾಗಿ ಇನ್ನಷ್ಟು ಬೆಳೆಸುವುದಲ್ಲದೆ ಈ ಭಾಷೆಯನ್ನು ಹೆಚ್ಚು ಮಂದಿ ಮಾತನಾಡುವಂತೆ ಪ್ರೇರೇಪಿಸಬೇಕಾಗಿದೆ. ಈ ದಿಸೆಯಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ದೇಶ-ವಿದೇಶಗಳಲ್ಲಿ 2018ರ ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನಾಚರಣೆ ಹಾಗೂ ಅಕ್ಟೊಬರ್‌ನಲ್ಲಿ ಬ್ಯಾರಿ ಭಾಷೆಯ ಕಾರ್ಯಕ್ರಮಗಳನ್ನು ನಡೆಸಿ ಬ್ಯಾರಿ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಮುಂದಾಗಬೇಕು ಎಂದು ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News