ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷರಾಗಿ ಸಿ.ಎಂ.ಮುಸ್ತಫ ಆಯ್ಕೆ

Update: 2018-09-21 10:31 GMT

ಮಂಗಳೂರು, ಸೆ.21: ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ, ಮಂಗಳೂರು ಇದರ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು.

ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಸಿ.ಎಂ.ಮುಸ್ತಫ, ಗೌರವಾಧ್ಯಕ್ಷರಾಗಿ ಭರತ್ ಭೂಷಣ್, ಕಾರ್ಯಾಧ್ಯಕ್ಷರಾಗಿ ಕೆ.ಅಶ್ರಫ್, ಉಪಾಧ್ಯಕ್ಷರಾಗಿ ಕೆ.ಇ.ರಶೀದ್, ಕೋಶಾಧಿಕಾರಿಯಾಗಿ ಕೆ.ಅಬ್ದುಲ್ ಅಝೀಝ್ ಪಿ.ಪಿ.ಎ., ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಇಬ್ರಾಹೀಂ, ಜೊತೆ ಕಾರ್ಯದರ್ಶಿಯಾಗಿ ಜೆ.ಬಿ.ಶಿವ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿ.ಬಿ.ಅಝರುದ್ದೀನ್, ಕೆ.ಎಂ.ಬಾವ, ಎಸ್.ಎ.ಸಲೀಂ ಸರ್ವಾನುಮತದಿಂದ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News