ಪುತ್ತೂರು : ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನ; ಸಮಾಲೋಚನಾ ಸಭೆ

Update: 2018-09-21 12:13 GMT

ಪುತ್ತೂರು,ಸೆ.21: ಪುತ್ತೂರಿನಲ್ಲಿ ನ.3ರಂದು ನಡೆಯಲಿರುವ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಶುಕ್ರವಾರ ಇಲ್ಲಿನ ಸುದಾನ ವಸತಿಯುತ ಶಾಲೆಯಲ್ಲಿ ನಡೆಯಿತು. 

ತುಳು ಸಾಹಿತ್ಯ ಅಕಾಡೆಮಿ ಮತ್ತು  ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಆಶ್ರಯದಲ್ಲಿ, ಸುದಾನ ವಸತಿಯುತ ಶಾಲೆಯ ಸಹಯೋಗದಲ್ಲಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನ.3ರಂದು ಸುದಾನಾ ಶಾಲಾ ವಠಾರದಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈ ಹಿನ್ನಲೆಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿ, ಕನ್ನಡ, ತುಳು ವಿದ್ವಾಂಸ ಪ್ರೊ.ಬಿ.ಎ. ವಿವೇಕ ರೈ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಸಚಿವರಾದ ಡಾ.ಜಯಮಾಲಾ ಮತ್ತು ಯು.ಟಿ. ಖಾದರ್ ಅವರನ್ನು ಆಮಂತ್ರಿಸಲು ನಿರ್ಧರಿಸಲಾಗಿದೆ ಎಂದು ಸೀತಾರಾಮ ರೈ ತಿಳಿಸಿದರು.

ನ.3ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಮ್ಮೇಳನ ಸುದಾನ ಶಾಲೆಯ ವಠಾರದಲ್ಲಿ ನಡೆಯಲಿದೆ. ಬೆಳಗ್ಗೆ 8.30ರಿಂದ ಶ್ರೀ ಮಹಾಲಿಂಗೇಶ್ವರ ದೇವಳದಿಂದ ಸಮ್ಮೇಳನ ಸ್ಥಳಕ್ಕೆ ಸಮ್ಮೇಳನ ಮೆರವಣಿಗೆ ತುಳು ದಿಬ್ಬಣ ನಡೆಯಲಿದೆ. 9 ಗಂಟೆಗೆ ಉದ್ಘಾಟನೆ ನಡೆಯಲಿದೆ. ಪ್ರತೀ ಕಾರ್ಯಕ್ರಮನ ಮಧ್ಯದಲ್ಲಿ ತುಳು ಗಾನ- ನಲಿಕೆ ಪೊಲಿಕೆ ಎಂಬ ವಿಶಿಷ್ಟ ಕಾವ್ಯ- ನಾಟ್ಯ ಕಾರ್ಯಕ್ರಮ ನಡೆಯಲಿದೆ.

"ತುಳು ಸಾಹಿತ್ಯೊದ ಮರ್ಗಿಲ್' ಎಂಬ ವಿಷಯದಲ್ಲಿ ಪಾತೆರಕತೆ, ದೈವನಿಲೆ ಎಂಬ ವಿಷಯದಲ್ಲಿ ಚಾವಡಿ ಕೂಟ, ಮಣ್ಣ್- ನೀರ್, ಬೆನ್ನಿ - ಬದ್‍ಕ್ ಎಂಬ ವಿಷಯದಲ್ಲಿ ತುಳು ತುಲಿಪು, ಕಬಿಕೂಟ ಎಂಬ ಹೆಸರಿನ ಕವಿಗೋಷ್ಠಿ, ತುಳು ರಂಗ್ ರಂಗಿತೊ ಎಂಬ ಹೆಸರಿನ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಸಂಜೆ 4.30ಕ್ಕೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ತುಳು ಸಾಧಕರಿಗೆ ಸನ್ಮಾನ ನಡೆಯಲಿದೆ. 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ತುಳು ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ತುಳು ಯಕ್ಷಗಾನ ತಾಳಮದ್ದಲೆ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

18 ಉಪ ಸಮಿತಿಗಳ ರಚನೆ
ಸಮ್ಮೇಳನದ ಯಶಸ್ವಿಗಾಗಿ 18 ಉಪ ಸಮಿತಿಗಳನ್ನು ರಚಿಸಲಾಯಿತು. ಆರ್ಥಿಕ ಸಮಿತಿ, ಕಾರ್ಯಕ್ರಮ ಸಂಯೋಜನಾ ಸಮಿತಿ, ಅತಿಥಿ ಸತ್ಕಾರ ಸಮಿತಿ, ವಿದ್ಯಾರ್ಥಿ ಸಾಹಿತ್ಯ ಸ್ಪರ್ಧೆ ಸಮಿತಿ, ಕ್ರೀಡಾಕೂಟ ಸಮಿತಿ, ಆಹಾರ ಸಮಿತಿ, ಸನ್ಮಾನ ಸಮಿತಿ, ತುಳು ತೂಪರಿಕೆ ಸಮಿತಿ, ತುಳುನಾಡ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಮಿತಿ, ಅಲಂಕಾರ ಸಮಿತಿ, ಮೆರವಣಿಗೆ ಸಮಿತಿ, ವಿದ್ಯಾರ್ಥಿ ಕ್ರೀಡಾ ಕೂಟ ಸಮಿತಿ, ಸಾಮಗ್ರಿ ಸಂಗ್ರಹ ಸಮಿತಿ, ಸ್ವಯಂ ಸೇವಕ ಸಮಿತಿ, ಮಹಿಳಾ ಸಮಿತಿ ಮತ್ತು ಸಾಂಸ್ಕøತಿಕ ಸಮಿತಿಗೆ ಸಂಚಾಲಕರು ಮತ್ತು ಸದಸ್ಯರನ್ನು ನೇಮಿಸಲಾಯಿತು.

ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ರಾಮಣ್ಣ ಗೌಡ ಗುಂಡೋಳೆ, ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಹಿರಿಯ ನ್ಯಾಯವಾದಿ ಬಿ. ಪುರಂದರ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜನಾರ್ದನ್, ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ನಗರಸಭಾ ಸದಸ್ಯ ಜೀವಂಧರ ಜೈನ್, ಆರ್ಥಿಕ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುದಾನ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಪ್ರಮುಖರಾದ ಡಾ. ನರೇಂದ್ರ ರೈ ದೇರ್ಲ, ಡಾ. ರಾಜೇಶ್ ಬೆಜ್ಜಂಗಳ, ಹೇಮನಾಥ ಶೆಟ್ಟಿ, ಶ್ರೀಧರ ರೈ, ಕುಂಬ್ರ ದುರ್ಗಾಪ್ರಸಾದ್ ರೈ, ಅಬ್ರಹಾಂ ವರ್ಗೀಸ್ ನೆಲ್ಯಾಡಿ, ಸಾಜ ರಾಧಾಕೃಷ್ಣ ಆಳ್ವ, ಸೀತಾರಾಮ ಕೇವಳ, ಲೋಕೇಶ್ ಹೆಗ್ಡೆ, ಜಯಸೂರ್ಯ ರೈ ಮಾದೋಡಿ, ಜಯಮಾಲಾ ವಿ.ಎನ್., ಹರಿಣಿ ಪುತ್ತೂರಾಯ, ಉಲ್ಲಾಸ್ ಕೋಟ್ಯಾನ್, ನಯನಾ ರೈ, ಹರಿಣಾಕ್ಷಿ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ, ಪ್ಯಾಟ್ರಿಕ್ ಸಿಪ್ರಿಯಾನ್, ಸುರೇಶ್ ರೈ ಸೂಡಿಮುಳ್ಳು, ಸುದರ್ಶನ್ ಕಂಪ, ವಿದ್ಯಾಶ್ರೀ, ಮಲ್ಲಿಕಾ ಜೆ. ರೈ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News