ನೈಜೀರಿಯದಲ್ಲಿ ಕಾಲರಾ; 97 ಸಾವು

Update: 2018-09-22 15:52 GMT

ಲಾಗೊಸ್ (ನೈಜೀರಿಯ), ಸೆ. 22: ಈಶಾನ್ಯ ನೈಜೀರಿಯದಲ್ಲಿ ಕಾಲರಾ ರೋಗ ಸ್ಫೋಟಿಸಿದ್ದು, ಎರಡು ವಾರಗಳ ಅವಧಿಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ತಿಳಿಸಿದೆ.

ಯೋಬೆ ಮತ್ತು ಬೊರ್ನೊ ರಾಜ್ಯಗಳನ್ನು ಒಳಗೊಂಡ ವಲಯದಲ್ಲಿ 3,000ಕ್ಕೂ ಅಧಿಕ ಕಾಲರಾ ರೋಗದ ಪ್ರಕರಣಗಳು ದಾಖಲಾಗಿವೆ ಎಂದು ಅದು ಹೇಳಿದೆ. ಇದೇ ವಲಯದಲ್ಲಿ ಬೊಕೊ ಹರಮ್ ಭಯೋತ್ಪಾದಕರೂ ಸಕ್ರಿಯರಾಗಿದ್ದಾರೆ.

‘‘ಈ ಎರಡು ರಾಜ್ಯಗಳಲ್ಲಿ ದಾಖಲಾದ ಒಟ್ಟು ಕಾಲರಾ ಪ್ರಕರಣಗಳ ಸಂಖ್ಯೆ 3,126 ಹಾಗೂ ಈ ಪೈಕಿ 97 ರೋಗಿಗಳು ಸಾವನ್ನಪ್ಪಿದ್ದಾರೆ’’ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News