ರಿಲಯೆನ್ಸ್ ಡಿಫೆನ್ಸ್ ಆಯ್ಕೆಯಲ್ಲಿ ತನ್ನ ಪಾತ್ರವಿಲ್ಲ: ಕೇಂದ್ರ ಸರಕಾರ

Update: 2018-09-22 15:34 GMT

ಹೊಸದಿಲ್ಲಿ, ಸೆ.22: ರಫೇಲ್ ಒಪ್ಪಂದದಲ್ಲಿ ಭಾರತದ ಪಾಲುದಾರನಾಗಿ ರಿಲಯೆನ್ಸ್ ಡಿಫೆನ್ಸ್ ಸಂಸ್ಥೆಯ ಆಯ್ಕೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇದು ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಸಂಸ್ಥೆ ಹಾಗೂ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ನಡುವಿನ ಜಂಟಿ ಉದ್ಯಮಕ್ಕಾಗಿನ ವಾಣಿಜ್ಯ ಒಪ್ಪಂದವಾಗಿದೆ ಎಂದು ತಿಳಿಸಿದೆ.

ಫ್ರಾನ್ಸ್‌ನ ಮಾಜಿ ಅಧ್ಯಕ್ಷರು ಹೇಳಿದ್ದಾರೆ ಎನ್ನಲಾದ ಮಾಧ್ಯಮದ ವರದಿಯ ಆಧಾರದಲ್ಲಿ ಅನವಶ್ಯಕ ವಿವಾದ ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ. ಭಾರತದ ‘ಆಫ್‌ಸೆಟ್ ’ ನೀತಿಯ ಪ್ರಕಾರ ವಿದೇಶಿ ಸಂಸ್ಥೆಗಳು ಭಾರತದ ಪಾಲುದಾರ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಸ್ವಾತಂತ್ರವಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. 2017ರ ಫೆಬ್ರವರಿಯಲ್ಲಿ ರಿಲಯನ್ಸ್ ಡಿಫೆನ್ಸ್ ಮತ್ತು ಡಸಾಲ್ಟ್ ಏವಿಯೇಷನ್ ನಡುವೆ ಜಂಟಿ ಉದ್ಯಮ ರೂಪುಗೊಂಡಿರುವುದಾಗಿ ವರದಿಯಾಗಿದೆ. ಇದು ಎರಡು ಖಾಸಗಿ ಸಂಸ್ಥೆಗಳ ನಡುವಿನ ವಾಣಿಜ್ಯ ಒಪ್ಪಂದವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಸಾಲ್ಟ್ ಏವಿಯೇಷನ್ ಸಂಸ್ಥೆ ಈಗಾಗಲೇ ಹಲವಾರು ಸಂಸ್ಥೆಗಳೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದು ಕಾನೂನಿನ ಅನ್ವಯವೇ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News