ಪಾಕ್ ಸೇನೆಗೆ ಸಾಮಗ್ರಿ ಪೂರೈಕೆ: ಉದ್ಯಮಿಗೆ ಶಿಕ್ಷೆ

Update: 2018-09-22 15:39 GMT

ವಾಶಿಂಗ್ಟನ್, ಸೆ. 22: ಅಮೆರಿಕದಲ್ಲಿ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ಸಂಗ್ರಹಿಸಿ, ಅವುಗಳನ್ನು ಸೇನಾ ಬಳಕೆಗಾಗಿ ಪಾಕಿಸ್ತಾನಕ್ಕೆ ಕಳಹಿಸಿದ ಆರೋಪದಲ್ಲಿ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬನಿಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದು ಮೂರು ವರ್ಷಗಳ ನಿಗಾ (ಪ್ರೊಬೇಶನ್) ಶಿಕ್ಷೆ ವಿಧಿಸಿದೆ.

ಕನೆಕ್ಟಿಕಟ್ ರಾಜ್ಯದ ನಾರ್ತ್ ಹ್ಯಾವನ್ ನಿವಾಸಿ 44 ವರ್ಷದ ಇಮ್ರಾನ್ ಖಾನ್‌ನನ್ನು ಬ್ರಿಜ್‌ಪೋರ್ಟ್ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದೆ.

ಈ ಪೈಕಿ ಮೊದಲ ಆರು ತಿಂಗಳನ್ನು ಅಮೆರಿಕದ ರಫ್ತು ಕಾನೂನನ್ನು ಉಲ್ಲಂಘಿಸಿರುವುದಕ್ಕಾಗಿ ಅವನು ಗೃಹಬಂಧನದಲ್ಲಿ ಕಳೆಯಬೇಕಾಗಿದೆ. ಅವನು 100 ಗಂಟೆಗಳ ಸಮುದಾಯ ಸೇವೆಯನ್ನೂ ಮಾಡಬೇಕಾಗಿದೆ ಹಾಗೂ 3,000 ಡಾಲರ್ ದಂಡ ಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News