ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಆರೆಸ್ಸೆಸ್ ಕೈವಶ: ರಾಹುಲ್ ಗಾಂಧಿ ಆರೋಪ

Update: 2018-09-22 17:31 GMT

ಹೊಸದಿಲ್ಲಿ, ಸೆ. 22: ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗದಂತಹ ಸಂಸ್ಧೆಗಳನ್ನು ಆರೆಸ್ಸೆಸ್ ವ್ಯವಸ್ಥಿತವಾಗಿ ಕೈವಶ ಮಾಡಿಕೊಂಡಿದೆ ಹಾಗೂ ಭಾರತ ಒಂದೇ ಚಿಂತನೆಯಿಂದ ಭಾರತ ನಡೆಯಲಾರದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಒಂದೇ ಸಿದ್ಧಾಂತವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂಬ ಭಾವನೆ ಜನರಿಗಿದೆ ಎಂದು ರಾಹುಲ್ ಗಾಂಧಿ ಶಿಕ್ಷಣ ತಜ್ಞರೊಂದಿಗೆ ಸಂವಹನ ನಡೆಸುತ್ತಾ ಹೇಳಿದರು. ನಾವು ದೇಶವನ್ನು ಸಂಘಟಿಸಲಿದ್ದೇವೆ ಎಂದು ಈ ಹಿಂದೆ ಭಾಷಣದಲ್ಲಿ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಹೇಳಿದ್ದರು. ರಾಷ್ಟ್ರವನ್ನು ಸಂಘಟಿಸುವುದು ಯಾರು ?, ದೇಶದ ಅದಾಗಿಯೇ ಸಂಘಟಿತವಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಅವರ ಕಲ್ಪನೆ ಧ್ವಂಸವಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಸಿರಿ ಫೋರ್ಟ್‌ನಲ್ಲಿ ದೇಶಾದ್ಯಂತದ ಪ್ರಮುಖ ಶಿಕ್ಷಣ ತಜ್ಞರೊಂದಿಗೆ ಸಂವಹನ ನಡೆಸುತ್ತಿರುವ ಸಂದರ್ಭ ರಾಹುಲ್ ಗಾಂಧಿ, ಭಾರತದ ಕುರಿತು ಎರಡು ದೃಷ್ಟಿಕೋನ ಇದೆ. ಕಾಂಗ್ರೆಸ್‌ನ ದೃಷ್ಟಿಕೋನ ಇಲ್ಲಿ ಜೀವಿಸುವ ಜನರ ಮೂಲಕ ದೇಶವನ್ನು ಕಟ್ಟುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News