ಏಶ್ಯಕಪ್ ಸೈಕ್ಲಿಂಗ್: ಭಾರತಕ್ಕೆ 1 ಚಿನ್ನ, 2 ಬೆಳ್ಳಿ

Update: 2018-09-22 18:13 GMT

ಹೊಸದಿಲ್ಲಿ, ಸೆ.22: ಐದನೇ ಆವೃತ್ತಿಯ ಟ್ರಾಕ್ ಏಶ್ಯಕಪ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಶನಿವಾರ ಭಾರತ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಜಯಿಸಿದೆ. ಸ್ಪರ್ಧೆಯಲ್ಲಿ ಒಟ್ಟು 4 ಚಿನ್ನ, 5 ಬೆಳ್ಳಿ ಹಾಗೂ 1 ಕಂಚಿನ ಪದಕ ಜಯಿಸಿರುವ ಭಾರತ ಪದಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

ಜೂನಿಯರ್ ಸೈಕಲಿಸ್ಟ್ ಚೋಬಾ ದೇವಿ ಭಾರತದ ಫೇವರಿಟ್ ನಯನಾ ರಾಜೇಶ್‌ರನ್ನು ಮಹಿಳೆಯರ ಎಲೈಟ್ 3 ಕಿ.ಮೀ.ವೈಯಕ್ತಿಕ ಸ್ಪರ್ಧೆಯ ಫೈನಲ್‌ನಲ್ಲಿ ಸೋಲಿಸಿ ಸ್ವರ್ಣ ಜಯಿಸಿದರು. ಸುಬರ್ನ ಬರ್ಮಾ ಕಂಚಿನ ಪದಕ ಜಯಿಸಿದರು.

ಪುರುಷರ ಜೂನಿಯರ್ 3 ಕಿ.ಮೀ. ವೈಯಕ್ತಿಕ ಸ್ಪರ್ಧೆಯ ಫೈನಲ್‌ನಲ್ಲಿ ಬಿಲಾಲ್ ಅಹ್ಮದ್ 3:28.273 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದುಕೊಂಡರು. ಕಝಕ್‌ಸ್ತಾನದ ಡೇನಿಲ್ ಪೆಖೋಟಿನ್(3:28.273) ಚಿನ್ನ ಜಯಿಸಿದರು. ಮಹಿಳೆಯರ ಜೂನಿಯರ್ 2 ಕಿ.ಮೀ. ವೈಯಕ್ತಿಕ ವಿಭಾಗದಲ್ಲಿ ಭಾರತದ ಸ್ವಸ್ತಿ ಸಿಂಗ್ 2:41.123 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News