ಸಾರ್ವಜನಿಕರಲ್ಲಿ ಶುಚಿತ್ವ ಅರಿವು ಮೂಡಿಸುವಲ್ಲಿ ಯುವ ಸಮೂಹ ಮುಂದಾಗಬೇಕು: ಮುಹಮ್ಮದ್ ಆರೀಫ್

Update: 2018-09-23 06:42 GMT

ಮಂಗಳೂರು, ಸೆ. 23: ದೇಶದ ಅಭಿವೃದ್ಧಿಯಲ್ಲಿ ಯುವ ಸಮೂದಾಯದ ಪಾತ್ರ ಅತೀ ಮುಖ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶುಚಿತ್ವ ದತ್ತ ಯುವ ಸಮುದಾಯ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಎಸ್ಡಿಪಿಐ ಎದುರುಪದವು ವಲಯ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಆರೀಫ್ ತಿಳಿಸಿದ್ದಾರೆ.

ಮಂಗಳೂರಿನ ಹೊರವಲಯದಲ್ಲಿರುವ  ಎದುರುಪದವು ಮೂಡುಶೆಡ್ಡೆಯಲ್ಲಿ ಇಂದು ಸ್ವಚ್ಚತೆಯ ಧ್ಯೇಯವನ್ನು ಮುಂದಿಟ್ಟುಕೊಂಡು ಶ್ರಮದಾನದ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದರು. ಎದುರುಪದವಿನ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಬೆಳೆದ ಪೊದೆಗಳನ್ನು ಮತ್ತು ಕಸಗಳ ತೆಗೆಯುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಶ್ರಮದಾನದಲ್ಲಿ ಎಸ್ಡಿಪಿಐ ಸ್ಥಳೀಯ ಮುಖಂಡ ಶಕೀರ್ ಎದುರುಪದವು ಮತ್ತು ಸ್ಥಳೀಯ ಗ್ರಾಮಸ್ಥರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News