ರಿಲಯನ್ಸ್ ನ ಆಯ್ಕೆಯಲ್ಲಿ ಸರಕಾರದ ಪಾತ್ರ ಇಲ್ಲ: ಸಚಿವ ಜೇಟ್ಲಿ

Update: 2018-09-23 08:50 GMT

ಹೊಸದಿಲ್ಲಿ, ಸೆ.23: ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿ ಭಾರತದ ಪಾಲುದಾರ ಸಂಸ್ಥೆ  ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ನ ಆಯ್ಕೆಯಲ್ಲಿ ಭಾರತ ಸರಕಾರ  ಅಥವಾ ಫ್ರಾನ್ಸ್ ಸರಕಾರದ ಕೈವಾಡ ಇಲ್ಲ  ಎಂದು ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿರುವ ಅರಣ್ ಜೇಟ್ಲಿ  ಅವರು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್  ಆರೋಪವನ್ನು ಫ್ರಾನ್ಸ್ ಸರಕಾರ ಮತ್ತು ಡಸಾಲ್ಟ್ ಈಗಾಗಲೇ ನಿರಾಕರಿಸಿದೆ. ಡಸಾಲ್ಟ್ ಕಂಪನಿಯು  ಪಾಲುದಾರ ಸಂಸ್ಥೆ ರಿಲಯನ್ಸ್ ಕಂಪನಿಯನ್ನು ಆಯ್ಕೆ ಮಾಡಿದೆ. ಇದರಲ್ಲಿ ಸರಕಾರದ ಪಾತ್ರ ಇಲ್ಲ  ಎಂದು ಹೇಳಿದರು.

 ರಫೇಲ್  ಯುದ್ಧ ವಿಮಾನ  ಖರೀದಿ ಒಪ್ಪಂದ ಪ್ರಕರಣಕ್ಕೆ  ಸಂಬಂಧಿಸಿ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್  ತನ್ನ  ಸ್ವಂತ ಹೇಳಿಕೆ ನೀಡಿದ್ದಾರೆ.

 ಫ್ರಾನ್ಸ್ ನಲ್ಲಿ ವಿರೋಧ ಪಕ್ಷದಲ್ಲಿರುವ ಫ್ರಾಂಕೊಯಿಸ್ ಹಾಲೆಂಡ್ ಅವರ ಹೇಳಿಕೆಗೂ ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿಯವರು  ಬಿಜೆಪಿ ನೇತೃತ್ವದ  ಕೇಂದ್ರ ಸರಕಾರದ  ವಿರುದ್ಧ ಮಾಡುತ್ತಿರುವ ಆರೋಪಗಳಿಗೂ  ಬಹಳಷ್ಟು  ಸಾಮ್ಯತೆಯಿದೆ. ಎರಡೂ ದೇಶಗಳ ನಾಯಕರು ಏಕಕಾಲದಲ್ಲಿ ಒಂದೇ ರೀತಿ ಮಾತನಾಡುತ್ತಿದ್ದಾರೆ  ಎಂದು ಗುಮಾನಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News