ವಿಟ್ಲ: ಮನೆಯಂಗಳದಲ್ಲಿ ಆಡುತ್ತಿದ್ದ ಬಾಲಕಿ ಕುಸಿದು ಬಿದ್ದು ಮೃತ್ಯು

Update: 2018-09-24 11:44 GMT

ಬಂಟ್ವಾಳ, ಸೆ. 24: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 8ನೆ ತರಗತಿ ಬಾಲಕಿ ಮೃತಪಟ್ಟ ಘಟನೆ ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. 

ಇಲ್ಲಿನ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 8ನೆ ತರಗತಿ ವಿದ್ಯಾರ್ಥಿನಿ, ವಿಟ್ಲ ಕಸಬಾ ಗ್ರಾಮದ ಮೇಗಿನ ಕಾನತ್ತಡ್ಕ ನಿವಾಸಿ ನಾಸೀರ್ ಅವರ ಪುತ್ರಿ ನಾದಿಯಾ(13) ಮೃತಪಟ್ಟ ಬಾಲಕಿ. 

ಬಾಲಕಿಗೆ ಅನಾರೋಗ್ಯ ಕಾಡುತ್ತಿದ್ದು, ಇತ್ತೀಚೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಇದರಿಂದ ಬಾಲಕಿ ಆಟವಾಡುತ್ತಿದ್ದ ವೇಳೆ ಕುಸಿದು ಮೃತಪಟ್ಟಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಮೃತ ವಿದ್ಯಾರ್ಥಿನಿಯ ಶೋಕಾರ್ಥ ಜೇಸಿಸ್ ಶಾಲೆಗೆ ಸೋಮವಾರ ರಜೆ ಸಾರಲಾಗಿತ್ತು. ಬಾಲಕಿಯ ಮನೆಯವರು ಈ ಬಗ್ಗೆ ಯಾವುದೇ ದೂರು ನೀಡದ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News