ಸೇವೆ ಸ್ಥಗಿತಗೊಳಿಸಿದ ‘ವಿರಾಟ್’ ಸಂರಕ್ಷಿಸಲು ಮಹಾರಾಷ್ಟ್ರ ಆಸಕ್ತಿ

Update: 2018-09-24 17:20 GMT

ಮುಂಬೈ, ಸೆ. 24: ಸೇವೆ ಸ್ಥಗಿತಗೊಳಿಸಿದ ವಿಮಾನ ವಾಹಕ ಹಡಗು ‘ವಿರಾಟ್’ ಅನ್ನು ಸಂರಕ್ಷಿಸಿ ಇರಿಸಲು ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ಸರಕಾರಗಳು ಆಕಾಂಕ್ಷೆ ವ್ಯಕ್ತಪಡಿಸಿವೆ ಎಂದು ನೌಕಾ ಪಡೆ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಹಡಗು ‘ವಿರಾಟ್’ ಅನ್ನು ಪರಿಶೀಲಿಸಲು ಮಹಾರಾಷ್ಟ್ರ ಸರಕಾರದ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ನೌಕಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಡಗು ಇರುವ ಸ್ಥಳ (ಅಂತಿಮವಾಗಿ ನಿಲ್ಲಿಸಿದ ಸ್ಥಳ)ದ ಬಗ್ಗೆ ಮಹಾರಾಷ್ಟ್ರ ಸರಕಾರ ಅಧ್ಯಯನ ನಡೆಸುತ್ತಿದೆ. ಸರಕಾರಿ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ. ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ಶೀಘ್ರದಲ್ಲಿ ಕೇಂದ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಸೇವೆ ರದ್ದುಗೊಳಿಸಿ ಮುಂಬೈ ನೌಕಾ ಧಕ್ಕೆ ಪ್ರದೇಶದಲ್ಲಿ ನಿಲ್ಲಿಸಲಾಗಿರುವ ಹಡಗಳನ್ನು ಸಂರಕ್ಷಿಸಿ ಇರಿಸುವಲ್ಲಿ ಗೋವಾ ಹಾಗೂ ಆಂಧ್ರಪ್ರದೇಶ ಸರಕಾರ ಆಸಕ್ತಿ ತೋರಿಸಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News