ಯುವತಿ, ಪ್ರಿಯಕರನ ತಲೆ ಕಡಿದು ಹತ್ಯೆ

Update: 2018-09-24 17:24 GMT

ಇಸ್ಲಾಮಾಬಾದ್, ಸೆ. 24: ಪಾಕಿಸ್ತಾನದಲ್ಲಿ 18 ವರ್ಷದ ಯುವತಿ ಮತ್ತು ಆಕೆಯ 21 ವರ್ಷದ ಗೆಳೆಯನನ್ನು ಹುಡುಗಿಯ ತಂದೆ ಮತ್ತು ಚಿಕ್ಕಪ್ಪ ತಲೆ ಕಡಿದು ಹತ್ಯೆ ಮಾಡಿದ್ದಾರೆ.

ಇದು ತಥಾಕಥಿತ ‘ಮರ್ಯಾದಾ ಹತ್ಯೆ’ ಎಂಬುದಾಗಿ ಪೊಲೀಸರು ಹೇಳಿದ್ದಾರೆ. ಅಟ್ಟಾಕ್ ಜಿಲ್ಲೆಯ ಸಣ್ಣ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.

ಯುವಕನು ಹುಡುಗಿಯನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದನು. ಸ್ವಲ್ಪ ಹೊತ್ತಿನ ಬಳಿಕ ಹುಡುಗಿಯ ತಂದೆ ಮತ್ತು ಚಿಕ್ಕಪ್ಪ ಮನೆಗೆ ಬಂದರು. ಇಬ್ಬರನ್ನೂ ಹಗ್ಗದಿಂದ ಕಟ್ಟಿ ಹಾಕಿದ ಅವರು ಬಳಿಕ ಚೂಪಾದ ಆಯುಧದಿಂದ ಅವರ ತಲೆ ಕಡಿದರು.

ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News