ಪಾದೂರು ಪೈಪ್‌ಲೈನ್ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹ

Update: 2018-09-24 18:31 GMT

ಉಡುಪಿ, ಸೆ.24: ಪಾದೂರು ಕಚ್ಛಾ ತೈಲ ಘಟಕದ ಪೈಪ್‌ಲೈನ್ ಕಾಮ ಗಾರಿ, ಸ್ಪೋಟಕ ಬಳಸಿದ ಪರಿಣಾಮ ಮನೆಗಳಿಗೆ ಉಂಟಾದ ಹಾನಿ ಹಾಗೂ ಸಾರ್ವಜನಿಕರ ಸ್ವಂತ ಜಾಗದಲ್ಲಿ ಪೈಪ್‌ಲೈನ್ ಮಾಡಿರುವುದಕ್ಕೆ ಸರಿಯಾದ ಪರಿಹಾರವನ್ನು ಒದಗಿಸಬೇಕೆಂದು ಮಾಸ್ ಇಂಡಿಯಾ ಎನ್‌ಜಿಓ ಕರ್ನಾಟಕ ಸರಕಾರವನ್ನು ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಸ್ ಇಂಡಿಯಾ ಅಧ್ಯಕ್ಷ ಜಿ.ಎ.ಕೋಟೆಯಾರ್ ಮಾತನಾಡಿ, ಕಚ್ಛಾ ತೈಲ ಘಟಕದ ಪೈಪ್‌ಲೈನ್ ಕಾಮಗಾರಿ ಯಿಂದ ತೊಂದರೆಗೆ ಒಳಗಾದ ಪಾದೂರು, ಕಳತ್ತೂರು, ಗುರ್ಮೆ ಗ್ರಾಮದ ಹಲವು ಮಂದಿಗೆ ಯಾವುದೇ ರೀತಿಯಲ್ಲಿ ಪರಿಹಾರ ದೊರೆತಿಲ್ಲ. ರಾಜಕೀಯ ಹಾಗೂ ಮಧ್ಯವರ್ತಿಗಳ ಬೆಂಬಲ ಇರುವ ಕೆಲವು ಮಂದಿಗೆ ಮಾತ್ರ ಇಲ್ಲಿ ಪರಿಹಾರ ಸಿಕ್ಕಿದೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಜೊತೆ ಭ್ರಷ್ಟಾಚಾರ ಕೂಡ ನಡೆದಿದೆ ಎಂದು ಆರೋಪಿಸಿದರು.

ಪೈಪ್‌ಲೈನ್ ಕಾಮಗಾರಿ ಸಂದರ್ಭ ಜನರಿಗೆ ನೀಡಿದ ಭರವಸೆಯಂತೆ ಯಾವುದೇ ಕ್ರಮ ಅಥವಾ ಪರಿಹಾರವಾಗಲಿ ದೊರೆತಿಲ್ಲ. ಈ ಕುರಿತು ಪ್ರಧಾನ ಮಂತ್ರಿಗೆ ಇಲ್ಲಿಯ ಜನರ ಕಷ್ಟ ಹಾಗೂ ಭ್ರಷ್ಟಾಚಾರದ ಕುರಿತು ಈಗಾಗಲೇ ಪತ್ರ ಬರೆಯಲಾಗಿದೆ. ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಇಲ್ಲಿನ ಸಾರ್ವಜನಿಕರಿಗೆ ಪರಿಹಾರ ಧನವನ್ನು ನೀಡಬೇು ಎಂದು ಅವರು ಒತ್ತಾಯಿಸಿ ದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ಸೇವಾ ಸಮಿತಿಯ ಕಾಪು ಮಹಿಳಾ ಅಧ್ಯಕ್ಷೆ ಐರಿನ್ ತಾವ್ರೋ, ಕಳತ್ತೂರು ಘಟಕದ ಅಧ್ಯಕ್ಷ ಪ್ರವೀಣ್, ಕಾಪು ಅಧ್ಯಕ್ಷ ಚಂದ್ರಶೇಖರ್ ಹಾಗೂ ಪಾದೂರು ಅಧ್ಯಕ್ಷ ಹರಿಕೃಷ್ಣ ತಂತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News