​ಸೆ.27-28: ವಾಣಿಜ್ಯ -ಔಷಧೀಯ ನಿರ್ವಹಣೆ ಬಗ್ಗೆ ಸಮ್ಮೇಳನ

Update: 2018-09-24 18:36 GMT

ಉಡುಪಿ, ಸೆ.24: ಮಣಿಪಾಲ ಮಾಹೆಯ ರಜತ ಮಹೋತ್ಸವದ ಅಂಗವಾಗಿ ವಾಣಿಜ್ಯ ಹಾಗೂ ಔಷಧೀಯ ನಿರ್ವಹಣೆ ವಿಭಾಗಗಳ ವತಿಯಿಂದ ವಾಣಿಜ್ಯ ಮತ್ತು ಔಷಧೀಯ ನಿರ್ವಹಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಸೆ.27 ಮತ್ತು 28ರಂದು ಹಮ್ಮಿಕೊಳ್ಳಲಾಗಿದೆ.

ಮಣಿಪಾಲ ಔಷಧೀಯ ವಿಜ್ಞಾನ ಕಾಲೇಜಿನ ಪ್ರೊ.ಗುಂಡುರಾವ್ ಹಾಲ್‌ನಲ್ಲಿ ನಡೆಯುವ ಸಮ್ಮೇಳನವನ್ನು ಸೆ.27ರಂದು ಬೆಳಗ್ಗೆ 10ಗಂಟೆಗೆ ಗ್ಲಾಟ್ ಗ್ರೂಪ್‌ನ ನಿರ್ವಾಹಕ ನಿರ್ದೇಶಕ ವಿಜಯ ವಿಠಲ ಉದ್ಘಾಟಿಸಲಿರುವರು. ಆಸ್ಟ್ರೇಲಿಯಾದ ಡೀಕಿನ್ ವಿವಿಯ ಸಹ ಡೀನ್ ಡಾ.ಅಲೆಕ್ಸ್ ನ್ಯುಮಾನ್ಸ್ ದಿಕ್ಸೂಚಿ ಭಾಷಣ ಮಾಡಲಿರುವರು ಎಂದು ಮಾಹೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ಶೆಣೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 150ಕ್ಕೂ ಅಧಿಕ ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿವಿಧ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಲಿರುವರು. ಸಂಶೋಧನಾತ್ಮಕ ಕೃತಿಗಳು, ಪ್ರಬಂಧಗಳನ್ನು ಮಂಡಿಸಲಾಗುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕಿ ಡಾ.ರಶ್ಮಿ ಯೋಗೀಶ್ ಪೈ, ಸಂಚಾಲಕ ಅಭಿಷೇಕ್ ರಾವ್, ರವೀಂದ್ರ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News