ಪಾಲ್ದನೆ ಚರ್ಚ್‌ನಲ್ಲಿ ಕೃತಿ ಬಿಡುಗಡೆ

Update: 2018-09-24 18:49 GMT

ಮಂಗಳೂರು, ಸೆ.24: ನಗರದ ಪಾಲ್ದನೆಯಲ್ಲಿರುವ ಸಂತ ತೆರೆಝಾ ಚರ್ಚ್‌ನ ಧರ್ಮಗುರು ವಂ.ಫಾ. ವಿನ್ಸೆಂಟ್ ವಿಕ್ಟರ್ ಮಿನೇಜಸ್ ರಚಿಸಿದ ‘ಕೆಥೋಲಿಕರ ವಿಶ್ವಾಸದ ವಿರುದ್ಧ ಮಾಡುವ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಕೃತಿ ‘ತವಳ್ ರಾಥ್ ಜಾಲ್ಲಿ’ಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ಧರ್ಮಪ್ರಾಂತದ ಜ್ಯುಡಿಷಿಯಲ್ ವಿಕಾರ್ ಫಾ. ವಾಲ್ಟರ್ ಡಿಮೆಲ್ಲೊ, ಚರ್ಚ್‌ನ ಉಪಾಧ್ಯಕ್ಷ ರೋಶನ್ ಲಸ್ರಾದೊ, ಕಾರ್ಯದಶಿರ್ ವೀಣಾ ಮಿನೇಜಸ್ ಉಪಸ್ಥಿತರಿದ್ದರು.

ಈ ಪುಸ್ತಕವು ಇತ್ತೀಚಿನ ದಿನಗಳಲ್ಲಿ ಕೆಥೋಲಿಕರಿಂದ ಬೇರ್ಪಟ್ಟು ಹಲವಾರು ಪಂಗಡಗಳಲ್ಲಿ ಕೆಲಸ ಮಾಡುವ ಕೆಲವರು ಕೆಥೋಲಿಕರ ವಿಶ್ವಾಸದ ವಿರುದ್ಧ ತಮ್ಮದೇ ಆದ ವ್ಯಾಖ್ಯಾನ ನೀಡಿ ಎತ್ತಿರುವ ಕೆಲವೊಂದು ಪ್ರಶ್ನೆಗಳಿಗೆ ಬೈಬಲಿನ ವಾಕ್ಯ ಹಾಗೂ ನಿದರ್ಶನಗಳನ್ನು ಮುಂದಿಟ್ಟು ಉತ್ತರಗಳನ್ನು ನೀಡಿದೆ. ಸುಮಾರು 10 ಅಧ್ಯಾಯಗಳಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. 1989ರಲ್ಲಿ ಪ್ರಕಟಗೊಂಡ ಈ ಕೃತಿಯನ್ನು ಹೊಸ ಆವೃತ್ತಿಯಾಗಿ ಪ್ರಕಟನೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News