ಪಾಲ್ದನೆ ಚರ್ಚ್‌ನಲ್ಲಿ ಫಾ. ವಾಲ್ಟರ್ ಡಿಮೆಲ್ಲೋಗೆ ಬೀಳ್ಕೊಡುಗೆ

Update: 2018-09-24 19:11 GMT

ಮಂಗಳೂರು, ಸೆ.24 ನಗರದ ಪಾಲ್ದನೆಯಲ್ಲಿರುವ ಸಂತ ತೆರೆಝಾ ಚರ್ಚ್‌ನಲ್ಲಿ ವಾಸ್ತವ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರು ಧರ್ಮಪ್ರಾಂತದ ಜ್ಯುಡಿಯಲ್ ವಿಕಾರ್ ಫಾ. ವಾಲ್ಟರ್ ಡಿಮೆಲ್ಲೋ ಅವರನ್ನು ರವಿವಾರ ಬಲಿಪೂಜೆು ಬಳಿಕ ಸನ್ಮಾನಿಸಿ ಬೀಳ್ಕೊಡಲಾಯಿತು.

ಮೊಡಂಕಾಪುನ ಇನ್‌ಫೆಂಟ್ ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಆ ಪ್ರಾಂತದ ವಿಕಾರ್ ವಾರ್ ಆಗಿ ಬಿಷಪ್ ಅವರಿಂದ ನೇಮಕಗೊಂಡ ಹಿನ್ನೆಲೆಯಲ್ಲಿ ಜ್ಯುಡಿಯಲ್ ವಿಕಾರ್ ಫಾ. ವಾಲ್ಟರ್ ಡಿಮೆಲ್ಲೋ ಅವರನ್ನು ಚರ್ಚ್‌ನ ಧರ್ಮಗುರು ವಂ. ವಿನ್ಸೆಂಟ್ ವಿಕ್ಟರ್ ಮಿನೇಜ್ ನೆನಪಿನ ಕಾಣಿಕೆಯನ್ನು ನೀಡಿದರು.
ಈ ಸಂದರ್ಭ ಚರ್ಚ್‌ನ ಉಪಾಧ್ಯಕ್ಷ ರೋಶನ್ ಲಸ್ರಾದೊ, ಕಾರ್ಯದರ್ಶಿ ವೀಣಾ ಮಿನೇಜಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News