ವಿದ್ಯಾ ವಿನುತಾ ಡಿಸೋಜರಿಗೆ ಪಿಎಚ್‌ಡಿ ಪದವಿ

Update: 2018-09-25 07:08 GMT

ಮಂಗಳೂರು, ಸೆ.25: ನಗರದ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಸಾಮಾಜಿಕ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿದ್ಯಾ ವಿನುತಾ ಡಿಸೋಜರಿಗೆ ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.

ವಿದ್ಯಾ ಅವರು ಮಂಡಿಸಿದ ‘ಕರಾವಳಿ ಕರ್ನಾಟಕದ ಆಳ ಸಮುದ್ರ ಮತ್ಸಗಾರರಲ್ಲಿ ಔದ್ಯೋಗಿಕ ಕಾಳಜಿ ಮತ್ತು ಭವಿಷ್ಯ - ಸಮಾಜೋ ಅಧ್ಯಯನ ದೃಷ್ಟಿಕೋನದಿಂದ’ (Employment Concerns and Prospects among Deep Sea Fishers in Coastal Karnataka - A Social Work Perspective) ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.

ಈ ಪ್ರಬಂಧವನ್ನು ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಎ.ಕೆ. ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News