ಸೆ.27ರಂದು ಮಳ್‌ಹರ್ ಸ್ವಲಾತ್ ಮಜ್ಲಿಸ್

Update: 2018-09-25 07:16 GMT

ಮಂಜೇಶ್ವರ, ಸೆ.25: ಇಲ್ಲಿನ ಮಳ್‌ಹರ್ ನೂರಿಲ್ ಇಸ್ಲಾಮಿತ್ತಅ್ಲೀಮಿಯ ಅಧೀನದಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಸೆ.27ರಂದು ಮಗ್ರಿಬ್ ನಮಾಝ್ ಬಳಿಕ ಮಳ್‌ಹರ್ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಮಳ್‌ಹರ್ ಉಪಾಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಹಮ್ಮದ್ ಅಶ್ರಫ್ ಜೌಹರಿ ಎರ್ಮಾಡ್ ಮುಖ್ಯ ಭಾಷಣ ಮಾಡುವರು.

ಸೈಯದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಸೈಯದ್ ಅಲವಿ ಜಲಾಲುದ್ದೀನ್ ಅಲ್ಹಾದಿ ಉಜಿರೆ, ಸೈಯದ್ ಮುಸ್ತಫ ಸಿದ್ದೀಕಿ ಮಂಬುರಂ, ಮುಹಮ್ಮದ್ ಸ್ವಾಲಿಹ್ ಸಅದಿ ತಳಿಪ್ಪರಂಬು, ಬಿ.ಎಸ್.ಅಬ್ದುಲ್ಲ ಕುಂಞಿ ಫ್ಯೆಝಿ, ಪಲ್ಲಂಗೋಡು ಅಬ್ದುಲ್ ಖಾದಿರ್ ಮದನಿ, ಮೂಸಲ್ ಮದನಿ ಅಲ್ ಬಿಶಾರ, ಮುಹಮ್ಮದ್ ಸಖಾಫಿ ಪಾತೂರು, ಹಸನ್ ಸಅದಿ ಅಲ್ ಅಫ್ಳಲಿ, ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿ, ಅಬೂಬಕರ್ ಸಿದ್ದೀಕ್ ಸಅದಿ ತೌಡುಗೋಳಿ, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಸನ್ ಕುಂಞಿ ಮಳ್‌ಹರ್‌ಮುಂತಾದವರು ಭಾಗವಹಿಸುವರು.

ಅಂದು ಅಪರಾಹ್ನ 2 ಗಂಟೆಗೆ ನಡೆಯುವ ಮಹಿಳಾ ತರಬೇತಿ ಹಾಗೂ ಆತ್ಮೀಯ ಸಂಗಮಕ್ಕೆ ಸೈಯದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ನೇತೃತ್ವ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News