ಜನ್ಮದಿಂದಲೇ ಮಗುವಿನ ಹಕ್ಕಿನ ಉಲ್ಲಂಘನೆ ಆರಂಭ: ಡಾ. ಕೃಪಾ ಆಳ್ವ

Update: 2018-09-25 12:45 GMT

ಮಂಗಳೂರು, ಸೆ.25: ಜನ್ಮದಿಂದಲೇ ಮಗುವಿನ ಹಕ್ಕಿನ ಉಲ್ಲಂಘನೆ ಆರಂಭವಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಮಕ್ಕಳನ್ನು ವಿಭಿನ್ನ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು ಕೂಡಾ ಅತೀ ಅಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವ ಅಭಿಪ್ರಾಯಿಸಿರು.

ಅವರು ಇಂದು ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಸೇವಾ ವಿಭಾಗದವರು ಕರ್ನಾಟಕ ಎಸೋಸಿಯೇಶನ್ ಆಫ್ ಪ್ರೊಪೆಶನಲ್ ಸೋಶಿಯಲ್ ವರ್ಕರ್ಸ್ ಸಹಯೋಗದೊಂದಿಗೆ ‘ಭಾರತದಲ್ಲಿ ಮಕ್ಕಳ ಹಕ್ಕುಗಳ ಖಾತರಿಪಡಿಸುವಿಕೆ:ಒಂದು ಸವಾಲು’ ಎಂಬ ವಿಷಯದಲ್ಲಿ ಎಕಾಲೇಜಿನ ಎರಿಕ್‌ಮಥಾಯಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜನಗಣತಿಯ ಪ್ರಕಾರ,ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತವು 1000: 898 ಆಗಿದ್ದು,ಭಾಗಶಃ ಭಾರತದಲ್ಲಿ ಶೇ.40ರಷಟುಮಕ್ಕಳು ಶಾಲೆಯ ಮೆಟ್ಟಿಲನ್ನು ಕೂಡ ಹತ್ತಲು ಸಾಧ್ಯವಾಗುವುದಿಲ್ಲ ಎಂದರು.

ತೊಂದರೆಯಲ್ಲಿರುವ ಅಥವಾ ತೊಂದರೆಗೀಡಾದ ಮಕ್ಕಳು ನ್ಯಾಯವನ್ನು ಪಡೆದುಕೊಳ್ಳುವವರೆಗೂ ಮಕ್ಕಳ ಹಕ್ಕುಗಳಿಗಾಗಿ ಹೋರಾಡಬೇಕೆಂದು ಅವರು ಮನವಿ ಮಾಡಿದರು.

ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ.ಡಯನೀಶಿಯಸ್ ವಾಜ್ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಉಪಸ್ಥಿತರಿದ್ದರು.

ಈ ವಿಚಾರಸಂಕಿರಣದಲ್ಲಿ ಎರಡು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ಅಜೀಮ್ ಪ್ರೇಮ್ಜಿ ಫೌಂಡೇಶನ್ನ ರಾಜ್ಯ ಮುಖ್ಯಸ್ಥರಾದ ಉಮಾಶಂಕರ ಪೆರಿಯೋಡಿಯವರು 'ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕುಗಳು:ಒಂದು ಅವಲೋಕನ' ಹಾಗೂ ಕಣ್ಣೂರಿನ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮ್ಯಾಥ್ಯೂ ತೆಲ್ಲಿಯಿಲ್ ರವರು 'ಭಾರತದ ನ್ಯಾಯವ್ಯವಸ್ಥೆಯಲ್ಲಿ ಬಾಲಾಪರಾಧ ಪ್ರಕರಣಗಳಲ್ಲಿ ಉದಯಿಸುವ ವಿಷಯಗಳು' ಎಂಬ ವಿಷಯಗಳಲ್ಲಿ ಮಾತನಾಡಿದರು. ಅಲ್ಲದೆ ಈ ವಿಚಾರಸಂಕಿರಣದಲ್ಲಿ ಅಂತರಕಾಲೇಜು ಕಿರು ಪ್ರಹಸನ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ, ಪೃಥ್ವಿ ಎಂ.ಸ್ವಾಗತಿಸಿದರು. ಶ್ವೇತ ರಸ್ಕೀನ್ಹಾ ಅತಿಥಿಯನ್ನು ಪರಿಚಯಿಸಿದರು.ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎನ್.ವಿ.ವಾಸುದೇವ ಶರ್ಮಾರವರು ವಿಚಾರಸಂಕಿರಣದ ಬಗ್ಗೆ ವಿವರಿಸಿದರು. ಪ್ರಿಯಾಂಕ ಐನ್ ಕಾರ್ಯಕ್ರಮ ನಿರೂಪಿಸಿದರು.ರಿಯಾ ಟೋಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News