ಯುವ ಜನತೆಯಲ್ಲಿ ದೃಷ್ಟಿಕೋನದ ಸಮಸ್ಯೆ: ಡಾ.ಗಣನಾಥ ಎಕ್ಕಾರು

Update: 2018-09-25 13:18 GMT

ಉಡುಪಿ, ಸೆ.25: ಸಾಮಾಜಿಕ ಜಾಲತಾಣಗಳ ಪ್ರಭಾವ ಯುವಜನತೆಯ ಮೇಲೆ ಹೆಚ್ಚಾಗುತ್ತಿದ್ದು, ಇದರಿಂದ ಯುವ ಜನತೆಯಲ್ಲಿ ದೃಷ್ಟಿಕೋನ ಹಾಗೂ ನಿರ್ಧಾರದ ಸಮಸ್ಯೆ ಎದುರಾಗಿದೆ. ಆದುದರಿಂದ ಯುವ ಜನತೆ ಸಾಂವಿಧಾನಿಕ ವೌಲ್ಯಗಳನ್ನು ಅರಿತು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಾಹಿತಿ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಮತ್ತು ತಾಲೂಕು ಘಟಕ, ಜಿಲ್ಲಾ ಲೇಖಕಿಯರ ಸಂಘಗಳ ಜಂಟಿ ಆಶ್ರಯದಲ್ಲಿ ಸೆ.22ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ದಿ.ಪುಳಿಮಾರು ಎಂ.ಕೃಷ್ಣ ಶೆಟ್ಟಿ ಸ್ಮಾರಕ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ದೇಶದ ಪ್ರಗತಿಯತ್ತ ಪ್ರಚಲಿತ ವಿದ್ಯಾಮಾನ ಎಂಬ ವಿಷಯದ ಕುರಿತು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಉದ್ಘಾಟಿ ಸಿದರು. ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ಆಶಯ ನುಡಿಗಳನ್ನಾಡಿದರು.

ಭವಾನಿ ವಿ.ಶೆಟ್ಟಿ, ಶಾರದಾ ಶೆಟ್ಟಿ, ಸೂರಾಲು ನಾರಾಯಣ ಮಡಿ, ಡಾ. ಬೋಜ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ರವಿನಂದನ್ ಹಾಗೂ ಅನು ಪಮಾ ಜೋಗಿ ಉಪಸ್ಥಿತರಿದ್ದರು. ಮುರಳೀಧರ ಸ್ವಾಗತಿಸಿದರು. ಮಧುರಾ ವಂದಿಸಿದರು. ಗಿರಿಜ ಹೆಗ್ಡೆ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News