ಮೋದಿ ಬಾಬಾ ಮತ್ತು 40 ಕಳ್ಳರು ಯಾವಾಗ ಉತ್ತರ ನೀಡುತ್ತಾರೆ: ಕಾಂಗ್ರೆಸ್

Update: 2018-09-25 13:20 GMT

ಹೊಸದಿಲ್ಲಿ, ಸೆ.25: “ದೇಶವು ಆಲಿ ಬಾಬ ಔರ್ ಚಾಲೀಸ್ ಚೋರ್ ಕಥೆಯ ಬಗ್ಗೆ ಕೇಳಿದೆ, ಈಗ ಮೋದಿ ಬಾಬಾ ಮತ್ತು ಚಾಲೀಸ್ ಚೋರ್ ಯಾವಾಗ ಉತ್ತರ ನೀಡುತ್ತಾರೆ ಎಂದು ದೇಶ ಕೇಳುತ್ತಿದೆ'' ಎಂದು ರಫೇಲ್ ವಿವಾದದ ಬಗ್ಗೆ ಪ್ರಧಾನಿ ಮೌನವನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅಣಕವಾಡಿದ್ದಾರೆ.

ತಮ್ಮ ಭಾವ ರಾಬರ್ಟ್ ವಾದ್ರಾ ಅವರಿಗೆ ಸಂಬಂಧ ಪಟ್ಟ ಸಂಸ್ಥೆಯೊಂದಕ್ಕೆ ಸಹಾಯ ಮಾಡುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಫೆಲ್ ಒಪ್ಪಂದ ರದ್ದುಗೊಳಿಸಲು ಯತ್ನಿಸುತ್ತಿದ್ದಾರೆಂಬ ಬಿಜೆಪಿಯ ಆರೋಪವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. “ಮೋದಿ ಸರಕಾರ ಈ ಶಂಕಿತ ಹಗರಣದ ಬಗ್ಗೆ ಸ್ಪಷ್ಟನೆ ನೀಡುವ ಬದಲು ನಿಂದನೆ ಮತ್ತು ಕೆಸರೆರಚಾಟದಲ್ಲಿ ತೊಡಗಿದೆ” ಎಂದು ಸುರ್ಜೇವಾಲ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷರು ಅಂತಾರಾಷ್ಟ್ರೀಯ ಸಂಚೊಂದರ ಭಾಗವಾಗಿದ್ದಾರೆ ಹಾಗೂ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್

ಅವರು ಕೂಡ ಇದರ ಭಾಗವಾಗಿ ರಾಫೆಲ್ ಒಪ್ಪಂದಕ್ಕೆ ಅಂತ್ಯ ಹಾಡಲು ಯತ್ನಿಸುತ್ತಿದ್ದಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ  ಸುರ್ಜೇವಾಲ, ``ಕಾಂಗ್ರೆಸ್ ಗುತ್ತಿಗೆಯನ್ನು ಎಚ್‍ಎಎಲ್ ಗೆ ನೀಡಿದ್ದರೆ ಪ್ರಧಾನಿ ಮೋದಿ ಅದನ್ನು ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಗೆ ನೀಡಿದ್ದರು'' ಎಂದರು.

“ನೀವು ಅಂಬಾನಿಯ ಪ್ರಧಾನಿಯೇ ಅಥವಾ ದೇಶದ ಪ್ರಧಾನಿಯೇ?'' ಎಂದೂ ಸುರ್ಜೇವಾಲ ಪ್ರಧಾನಿಯನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News