ಹಿ.ಪ್ರದೇಶ: ನಾಪತ್ತೆಯಾಗಿದ್ದ 45 ಐಐಟಿ ವಿದ್ಯಾರ್ಥಿಗಳು ಸುರಕ್ಷಿತ

Update: 2018-09-25 14:21 GMT

ಶಿಮ್ಲಾ,ಸೆ.23: ಮಳೆಯಿಂದಾಗಿ ತೀವ್ರವಾಗಿ ಬಾಧಿಸಲ್ಪಟ್ಟಿರುವ ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ನಾಪತ್ತೆಯಾಗಿದ್ದ 45 ಐಐಟಿ ವಿದ್ಯಾರ್ಥಿಗಳೂ ಸೇರಿದಂತೆ ಮುನ್ನೂರು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಸರಕಾರದ ಅಧಿಕಾರಿ ತಿಳಿಸಿದ್ದಾರೆ. ಹಿಮಮಳೆಯಿಂದಾಗಿ ರೊಹ್ಟಂಗ್ ಪಾಸ್ ಮತ್ತು ಒಳರಸ್ತೆಗಳು ಮುಚ್ಚಿದ ಪರಿಣಾಮ ಟ್ರೆಕ್ಕಿಂಗ್ ಆಗಮಿಸಿದ್ದ ಐಐಟಿ ವಿದ್ಯಾರ್ಥಿಗಳೂ ಸೇರಿ 300 ಮಂದಿ ತೊಂದರೆಗೆ ಸಿಲುಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದ ಜನರ ಪತ್ತೆಕಾರ್ಯಕ್ಕಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗಿಳಿದಿತ್ತು. ಕೆಟ್ಟ ಹವಾಮಾನ ಮತ್ತು ಹಿಮಮಳೆಯಿಂದ ಸಿಲುಕಿಕೊಂಡಿದ್ದ ಜನರನ್ನು ವಾಯುಪಡೆ ಸುರಕ್ಷಿತವಾಗಿ ರಕ್ಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News