ಮೋದಿಯ ಪ್ರತಿ ಕಳ್ಳತನ ಶೀಘ್ರ ಬಹಿರಂಗ: ರಾಹುಲ್ ಗಾಂಧಿ

Update: 2018-09-25 14:45 GMT

ಅಮೇಥಿ, ಸೆ. 25: “ತಮಾಷೆ ಈಗ ಆರಂಭವಾಗಿದೆಯಷ್ಟೆ. ನರೇಂದ್ರ ಮೋದಿ ಸರಕಾರದ ಪ್ರತಿ ಉಪಕ್ರಮಗಳು ಹೇಗೆ ಕಳ್ಳತನದ ಕಾರ್ಯ ಎಂಬುದನ್ನು ಪಕ್ಷ ಮುಂದಿನ ತಿಂಗಳುಗಳಲ್ಲಿ ಬಹಿರಂಗಪಡಿಸಲಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ಯುದ್ಧ ವಿಮಾನ ರಫೇಲ್ ಖರೀದಿ ಒಪ್ಪಂದದ ಕುರಿತು ಕೇಂದ್ರ ಸರಕಾರದ ವಿರುದ್ಧದ ತೀವ್ರ ಟೀಕೆ ಮುಂದುವರಿಸಿರುವ ರಾಹುಲ್ ಗಾಂಧಿ, ಈ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಿಲ್ ಅಂಬಾನಿ ಪರವಾಗಿ ಭ್ರಷ್ಟಾಚಾರಕ್ಕೆ ನೆರವು ನೀಡಿದ್ದಾರೆ ಎಂದಿದ್ದಾರೆ.

ಭಷ್ಟಾಚಾರ ನಿರ್ಮೂಲನೆಗೆ ಯಾರು ಬಂದರೋ ಅವರೇ ಅನಿಲ್ ಅಂಬಾನಿ ಅವರಿಗೆ 30 ಸಾವಿರ ಕೋ. ರೂ. ನೀಡಿದ್ದಾರೆ. ತಮಾಷೆ ಈಗ ಆರಂಭವಾಗಿದೆಯಷ್ಟೆ. ವಿಷಯಗಳು ಇನ್ನಷ್ಟು ಆಸಕ್ತಿಕರವಾಗಲಿದೆ ಎಂದು ಅವರು ಹೇಳಿದರು.

  ನರೇಂದ್ರ ಮೋದಿ ಅವರ ಕಾರ್ಯಗಳಾದ, ರಪೇಲ್ ಒಪ್ಪಂದ, ವಿಜಯ್ ಮಲ್ಯ, ಲಲಿತ್ ಮೋದಿ, ನೋಟು ನಿಷೇಧ, ಗಬ್ಬರ್ ಸಿಂಗ್ ತೆರಿಗೆಗೆ ಬಗ್ಗೆ ನಾವು ವಿವರಗಳನ್ನು ನಾವು ಮಂದಿನ ಎರಡು ಮೂರು ತಿಂಗಳಲ್ಲಿ ಬಹಿರಂಗಪಡಿಸಲಿದ್ದೇವೆ. ಆ ಬಳಿಕ ನೀವು ಇನ್ನಷ್ಟು ತಮಾಷೆ ನೋಡುವಿರಿ ಎಂದು ಅವರು ಹೇಳಿದ್ದಾರೆ.

ಅಮೇಥಿಯಲ್ಲಿ ಸೋಮವಾರ ರಾತ್ರಿ ಕಾಂಗ್ರೆಸ್‌ನ ಸಾಮಾಜಿಕ ಜಾಲ ತಾಣದ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.

ಅಮೇಥಿಯಲ್ಲಿರುವ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಈ ಸಂವಹನ ಏರ್ಪಡಿಸಲಾಗಿತ್ತು. ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ. ಆದರೆ, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ವಿರುದ್ಧ ಮಾಡಿದ ಟೀಕೆಯನ್ನು ಕೆಲವು ಕಾರ್ಯಕರ್ತರು ದಾಖ ಲಿಸಿಕೊಂಡು ಸ್ಥಳೀಯ ಸುದ್ದಿಗಾರರಂದಿಗೆ ಹಂಚಿಕೊಂಡಿರುವು ದರಿಂದ ಇದು ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News