ಅತ್ಯಾಚಾರಕ್ಕೊಳಗಾದ 3 ವರ್ಷದ ಬಾಲಕಿ ಮೃತ್ಯು

Update: 2018-09-25 15:25 GMT

ರಾಂಚಿ, ಸೆ.25: ಜಾರ್ಖಂಡ್‌ನ ಗುಮಿಯಾ ಜಿಲ್ಲೆಯ ಕೋಲುಟೋಲಿ ಗ್ರಾಮದಲ್ಲಿ 20ರ ಹರೆಯದ ಯುವಕನಿಂದ ಅತ್ಯಾಚಾರಕ್ಕೊಳಗಾದ ಮೂರು ವರ್ಷ ಪ್ರಾಯದ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಆರೋಪಿಯು ಪರಾರಿಯಾಗಿದ್ದು,ಆತನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಚಾಕಲೇಟ್ ಆಮಿಷವೊಡ್ಡಿ ನೆರೆಮನೆಯ ಬಾಲಕಿ ತನ್ನ ಮನೆಯೊಳಗೆ ಬರುವಂತೆ ಮಾಡಿದ್ದ ಬಂಧನ್ ಓರಾನ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು,ಈ ವೇಳೆ ಬಾಲಕಿಯ ಆಕ್ರಂದನವನ್ನು ಕೇಳಿ ಗ್ರಾಮಸ್ಥರು ಮನೆಗೆ ಮುತ್ತಿಗೆ ಹಾಕಿ ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಆದರೆ ಆ ವೇಳೆಗಾಗಲೇ ಓರಾನ್ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News