ಭಾರತ-ಪಾಕ್ ವೈರತ್ವದಿಂದ 2.54 ಲಕ್ಷ ಕೋಟಿ ರೂ. ವ್ಯಾಪಾರ ನಷ್ಟ: ವಿಶ್ವಬ್ಯಾಂಕ್ ವಿಷಾದ

Update: 2018-09-25 15:26 GMT

ನ್ಯೂಯಾರ್ಕ್, ಸೆ. 25: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವೈರತ್ವದಿಂದಾಗಿ ಆ ದೇಶಗಳ ನಡುವೆ 35 ಬಿಲಿಯ ಡಾಲರ್ (ಸುಮಾರು 2.54 ಲಕ್ಷ ಕೋಟಿ ರೂಪಾಯಿ) ಮೊತ್ತದ ವ್ಯಾಪಾರ ನಷ್ಟವಾಗಿದೆ ಎಂದು ವಿಶ್ವಬ್ಯಾಂಕ್ ವರದಿಯೊಂದರಲ್ಲಿ ಹೇಳಿದೆ.

ಎರಡು ದೇಶಗಳಲ್ಲಿ ವ್ಯಾಪಕವಾಗಿರುವ ಬಡತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಾಯಕರು ಪರಸ್ಪರ ವ್ಯಾಪಾರವನ್ನು ಹೆಚ್ಚಿಸಲು ಮುಂದಾಗಬೇಕು ಎಂಬುದಾಗಿ ಆ ದೇಶಗಳ ನಾಯಕರಿಗೆ ಯಾರಾದರೂ ಹೇಳಬೇಕು ಎಂದು ವರದಿ ಹೇಳಿದೆ.

ದ್ವೇಷ ಕಾರುವ ಬದಲು ಪರಸ್ಪರ ಸಹಕರಿಸಿ ಎಂದು ವಿಶ್ವಬ್ಯಾಂಕ್ ದಕ್ಷಿಣ ಏಶ್ಯಕ್ಕೆ ಕರೆ ನೀಡಿದೆ. ದಕ್ಷಿಣ ಏಶ್ಯವು ಜಗತ್ತಿನ ಕನಿಷ್ಠ ಆರ್ಥಿಕ ಸಹಕಾರದ ವಲಯವಾಗಿದೆ ಎಂದು ಅದು ಹೇಳಿದೆ.

ಈ ವಲಯದ ಬೃಹತ್ ಆರ್ಥಿಕತೆಗಳಾದ ಭಾರತ ಮತ್ತು ಪಾಕಿಸ್ತಾನಗಳು ಕೃತಕ ತಡೆಬೇಲಿಗಳನ್ನು ತೆಗೆದುಹಾಕಿದರೆ ಅವುಗಳ ನಡುವಿನ ವ್ಯಾಪಾರವು ಈಗಿನ 2 ಬಿಲಿಯ ಡಾಲರ್ (ಸುಮಾರು 14,526 ಕೋಟಿ ರೂಪಾಯಿ)ನಿಂದ 37 ಬಿಲಿಯ ಡಾಲರ್ (ಸುಮಾರು 2.68 ಲಕ್ಷ ಕೋಟಿ ರೂಪಾಯಿ)ಗೆ ಜಿಗಿಯಬಹುದಾಗಿದೆ ಎಂದು ಕಳೆದ ವಾರ ಬಿಡುಗಡೆಗೊಂಡ ವರದಿ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News