ಬೆಂಕಿ ಅವಘಡಕ್ಕೊಳಗಾದ ಕಟ್ಟಡದಿಂದ 5 ದಿನಗಳ ಬಳಿಕ ವೃದ್ಧನ ರಕ್ಷಣೆ

Update: 2018-09-25 15:28 GMT

ವಾಶಿಂಗ್ಟನ್, ಸೆ. 25: ಐದು ದಿನಗಳ ಹಿಂದೆ ಬೆಂಕಿಯಿಂದ ಸುಟ್ಟುಹೋದ ಸಾರ್ವಜನಿಕ ವಸತಿ ಸಂಕೀರ್ಣವೊಂದರ ಅವಶೇಷಗಳ ಪರಿಶೀಲನೆ ನಡೆಸುತ್ತಿದ್ದ ಇಂಜಿನಿಯರ್‌ಗಳು, ಸೋಮವಾರ 74 ವರ್ಷದ ನಿವಾಸಿಯೊಬ್ಬರನ್ನು ಜೀವಂತವಾಗಿ ಪತ್ತೆಹಚ್ಚಿದ್ದಾರೆ.

ಆಗ್ನೇಯ ವಾಶಿಂಗ್ಟನ್‌ನಲ್ಲಿರುವ ಆರ್ಥರ್ ಕ್ಯಾಪರ್ ಸೀನಿಯರ್ ಪಬ್ಲಿಕ್ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿತ್ತು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಮೀಪದ ಬರಾಕ್‌ಗಳ ಮರೀನ್ ಸೈನಿಕರು ಉರಿಯುತ್ತಿರುವ ಕಟ್ಟಡದಿಂದ ನಿವಾಸಿಗಳನ್ನು ತೆರವುಗೊಳಿಸಿದ್ದರು. ಅವರಲ್ಲಿ ಕೆಲವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯವಾಗಿಲ್ಲ.

ಸೋಮವಾರ, ಇಂಜಿನಿಯರ್‌ಗಳ ತಂಡವೊಂದು ಹಾನಿಗೊಂಡ ಕಟ್ಟಡವನ್ನು ಪರಿಶೀಲಿಸುತ್ತಿದ್ದಾಗ ಈ ವ್ಯಕ್ತಿ ಬೊಬ್ಬೆ ಹೊಡೆಯುತ್ತಿರುವುದು ಕೇಳಿಸಿತು. ಇಂಜಿನಿಯರ್‌ಗಳು ಜಜ್ಜಿಹೋಗಿದ್ದ ಬಾಗಿಲನ್ನು ತೆರೆದಾಗ ಆ ವ್ಯಕ್ತಿ ಕುರ್ಚಿಯೊಂದರಲ್ಲಿ ಶಾಂತವಾಗಿ ಕುಳಿತುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News