ತಾಜ್‌ಮಹಲ್ ಯೋಜನೆ ದಾಖಲೆ ಗಡು ವಿಸ್ತರಿಸಿದ ಸುಪ್ರೀಂ

Update: 2018-09-25 16:40 GMT

ಹೊಸದಿಲ್ಲಿ, ಸೆ. 25: ತಾಜ್ ಮಹಲ್ ಅನ್ನು ಮಾಲಿನ್ಯದಿಂದ ರಕ್ಷಿಸುವ ಕುರಿತ ಯೋಜನೆ ದಾಖಲೆ ಸಲ್ಲಿಸಲು ಸುಪ್ರೀಂಕೋರ್ಟ್ ಉತ್ತರಪ್ರದೇಶಕ್ಕೆ ನೀಡಿದ್ದ ಸಮಯಾವ ಕಾಶವನ್ನು ನವೆಂಬರ್ 15ರ ವರೆಗೆ ಮುಂದೂಡಿದೆ.

ಪೂರ್ಣ ಆಗ್ರಾ ಪಾರಂಪರಿಕ ನಗರ ಎಂದು ಘೋಷಿಸುವುದು ಕಷ್ಟಕರ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಪೀಠಕ್ಕೆ ರಾಜ್ಯ ಸರಕಾರ ತಿಳಿಸಿದೆ. ತಾಜ್‌ಮಹಲ್‌ನ ಸುತ್ತಮುತ್ತಲ ಪ್ರದೇಶದ ನಿರ್ದಿಷ್ಟ ಭಾಗವನ್ನು ಪಾರಂಪರಿಕ ಎಂದು ಘೋಷಿಸಲು ಪರಿಗಣಿಸಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ತಿಳಿಸಿತ್ತು. ತಾಜ್‌ಮಹಲ್ ಸುತ್ತಮುತ್ತಲಿನ ಪ್ರದೇಶವನ್ನು ಪಾರಂಪರಿಕ ಎಂದು ಘೋಷಿಸುವ ಕುರಿತು ಅಹ್ಮದಾಬಾದ್ ಮೂಲದ ಪಾರಿಸರಿಕ ಯೋಜನೆ ಹಾಗೂ ತಂತ್ರಜ್ಞಾನ ಕೇಂದ್ರ ನೆರವು ನೀಡಲಿದೆ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

ಈ ಪ್ರಕರಣದ ವಿಚಾರಣೆ ನವೆಂಬರ್ 29ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News