ಏಶ್ಯಕಪ್‌: ಅಫ್ರಿದಿ ದಾಖಲೆ ಸರಿಗಟ್ಟಿದ ಮುಹಮ್ಮದ್ ಶಾಝಾದ್

Update: 2018-09-25 17:26 GMT

ದುಬೈ, ಸೆ.25: ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮುಹಮ್ಮದ್ ಶಾಝಾದ್ ತಂಡ ಕನಿಷ್ಠ ಮೊತ್ತ ಗಳಿಸಿದ್ದಾಗ ಶತಕ ಸಿಡಿಸುವ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿ ದಾಖಲೆಯನ್ನು ಸರಿಗಟ್ಟಿದರು.

 ಭಾರತ ವಿರುದ್ಧ ಮಂಗಳವಾರ ನಡೆದ ಏಶ್ಯಕಪ್‌ನ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನದ ಒಟ್ಟು ಮೊತ್ತ 131 ಇದ್ದಾಗ ಶಾಝಾದ್ ಶತಕ ಪೂರೈಸಿದರು. ಅಫ್ರಿದಿ 2005ರಲ್ಲಿ ಕಾನ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧವೇ ಪಾಕ್ ತಂಡದ ಒಟ್ಟು ಮೊತ್ತ 131 ರಲ್ಲಿದ್ದಾಗ ಶತಕ ಪೂರೈಸಿದ್ದರು.

2011ರಲ್ಲಿ ಆಸ್ಟ್ರೇಲಿಯದ ಶೇನ್ ವಾಟ್ಸನ್ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಪೂರೈಸಿದಾಗ ತಂಡದ ಮೊತ್ತ 135 ಆಗಿತ್ತು. 30ರ ಹರೆಯದ ಶಾಝಾದ್ ಕೇವಲ 88 ಎಸೆತಗಳಲ್ಲಿ 5ನೇ ಶತಕ ಸಿಡಿಸಿದರು. ಅಗ್ರ ಕ್ರಿಕೆಟ್ ತಂಡದ ವಿರುದ್ಧ ಶತಕ ಸಿಡಿಸಿದ ಅಫ್ಘಾನ್‌ನ ಮೊದಲ ಆಟಗಾರ ಎನಿಸಿಕೊಂಡರು.

ಶಾಝಾದ್ 2009ರಲ್ಲಿ ಹಾಲೆಂಡ್ ವಿರುದ್ಧ 110 ರನ್ ಗಳಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದ ಅಫ್ಘಾನ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದರು. ಇಂದು 38ನೇ ಓವರ್‌ನಲ್ಲಿ ಕೇದಾರ್ ಜಾಧವ್‌ಗೆ ವಿಕೆಟ್ ಒಪ್ಪಿಸಿದ ಶಾಝಾದ್ 116 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News