ಮನೆ ಕೆಲಸದಾಕೆಯಿಂದ ಬಳೆ ಕಳವು: ದೂರು

Update: 2018-09-25 17:56 GMT

ಕಾರ್ಕಳ, ಸೆ.25: ಮನೆ ಕೆಲಸದಾಕೆ ಲಕ್ಷಾಂತರ ರೂ. ಮೌಲ್ಯದ ವಜ್ರದ ಬಳೆಗಳನ್ನು ಕಳವು ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ನಂದಳಿಕೆ ಮುಖ್ಯ ರಸ್ತೆಯ ನಿವಾಸಿ ಶೋಧನ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೆಡ್‌ರೂಮ್ನಲ್ಲಿರುವ ಮೇಕಪ್ ಟೇಬಲ್ನಲ್ಲಿಟ್ಟಿದ್ದ ಅವರ ಪತ್ನಿಯ 38.380 ಗ್ರಾಂ ತೂಕದ 4,24,569ರೂ. ಮೌಲ್ಯದ ಎರಡು ವಜ್ರದ ಬಳೆಗಳನ್ನು ಮನೆ ಕೆಲಸದಾಕೆ ದಾವಣಗೆರೆ ಮೂಲದ ಜಯ ಎಂಬಾಕೆ ಕಳವು ಮಾಡಿಕೊಂಡು ಹೋಗಿರುವುದಾಗಿ ಸಂಶಯಿಸಲಾಗಿೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News