ಮೂರು ದಶಕದ ಬಳಿಕ ಅತ್ಯಾಚಾರ ಬಹಿರಂಗಪಡಿಸಿದ ರೂಪದರ್ಶಿ

Update: 2018-09-26 03:57 GMT

ವಾಷಿಂಗ್ಟನ್, ಸೆ.26: ಹದಿಹರೆಯದಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಅಮೆರಿಕದ ಖ್ಯಾತ ಟಿವಿ ತಾರೆ, ಲೇಖಕಿ, ನಟಿ ಮತ್ತು ರೂಪದರ್ಶಿ ಬಹಿರಂಗಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ಗೆ ನಾಮನಿರ್ದೇಶನಗೊಂಡಿರುವ ಬ್ರೆಟ್ ಕವನೊವ್ಹ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಒಂದು ದಶಕದವರೆಗೂ ವರದಿಯಾಗಿರಲೇ ಇಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದ ಲೇಖನದಲ್ಲಿ ಪದ್ಮಲಕ್ಷ್ಮಿ ಇದನ್ನು ಬಹಿರಂಗಪಡಿಸಿದ್ದಾರೆ. "ಟಾಪ್ ಶೆಫ್" ಅಂಕಣದಲ್ಲಿ ಏಳನೇ ವರ್ಷದಲ್ಲಿದ್ದಾಗ ಮೊದಲ ಬಾರಿಗೆ ನನ್ನ ವಿರುದ್ಧ ಲೈಂಗಿಕ ಹಲ್ಲೆ ನಡೆದಿತ್ತು. 16 ವರ್ಷದವಳಿದ್ದಾಗ ಅತ್ಯಾಚಾರ ನಡೆದಿತ್ತು ಎಂದು ವಿವರಿಸಿದ್ದಾರೆ.

"ಹದಿನಾರನೇ ವರ್ಷದಲ್ಲಿ ನಾನು ಲಾಸ್‌ ಏಂಜಲೀಸ್‌ನ ಮಾಲ್‌ನಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದೆ. 23 ವರ್ಷದ "ಸ್ಫುರದ್ರೂಪಿ ಮತ್ತು ಆಕರ್ಷಕ" ಕಾಲೇಜು ವಿದ್ಯಾರ್ಥಿ ಫ್ಲರ್ಟ್ ಮಾಡುತ್ತಿದ್ದ. ಈ ಸಂಬಂಧ ಆರಂಭವಾದ ಕೆಲವೇ ತಿಂಗಳಲ್ಲಿ ನಾನು ನಿದ್ರೆಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದ" ಎಂದು ಹೇಳಿದ್ದಾರೆ.
 "ಇದು ಅತ್ಯಾಚಾರವೇ ಅಥವಾ ಲೈಂಗಿಕತೆಯೇ ಗೊತ್ತಿಲ್ಲ. ಆದರೆ ಮುಂದೆ ಕೂಡಾ ಸ್ನೇಹಿತರಿಗೆ ನಾನು ಕನ್ಯೆ ಎಂದೇ ಹೇಳುತ್ತಿದ್ದೆ. ಇಂದಿಗೂ ಭಾವನಾತ್ಮಕವಾಗಿ ಹಾಗೆಯೇ ಇದ್ದೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News