ಪೊಲೀಸರು ರಾಜೀನಾಮೆ ನೀಡುತ್ತಿರುವುದನ್ನು ಒಪ್ಪಿಕೊಂಡ ಜಮ್ಮು ಕಾಶ್ಮೀರ ಸರಕಾರ

Update: 2018-09-26 10:30 GMT
ಫೋಟೊ ಕೃಪೆ: ndtv.com

ಶ್ರೀನಗರ, ಸೆ.26: ಜಮ್ಮು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿಗಳು (ಎಸ್‍ಪಿಒ) ಉಗ್ರರ ಬೆದರಿಕೆಗಳಿಂದ ರಾಜೀನಾಮೆ ನೀಡುತ್ತಿರುವ ವೀಡಿಯೋಗಳು ಉಗ್ರರ ಕುತಂತ್ರ ಎಂದು ಬಣ್ಣಿಸಿ ಕೇಂದ್ರ ಸರಕಾರ ಅಲ್ಲಗಳೆದ ಬೆನ್ನಲ್ಲೇ ದಕ್ಷಿಣ ಕಾಶ್ಮಿರದಲ್ಲಿ ಎಸ್‍ಪಿಒಗಳು ರಾಜೀನಾಮೆ ನೀಡುತ್ತಿದ್ದಾರೆಂದು ಜಮ್ಮು ಕಾಶ್ಮಿರ ಸರಕಾರ ಒಪ್ಪಿದೆ. ಆದರೆ ರಾಜೀನಾಮೆ ನೀಡುತ್ತಿರುವ ಅಧಿಕಾರಿಗಳ ಸಂಖ್ಯೆ ನಗಣ್ಯ ಎಂದು ಸರಕಾರ ಹೇಳಿದೆ.

``ರಾಜ್ಯದಲ್ಲಿ 30,000ಕ್ಕೂ ಅಧಿಕ ಎಸ್‍ಪಿಒಗಳಿದ್ದಾರೆ. ಈ ಸಂಖ್ಯೆಗೆ ಹೋಲಿಸಿದಾಗ  ರಾಜೀನಾಮೆ ನೀಡಿದವರ ಸಂಖ್ಯೆ ನಗಣ್ಯ,'' ಎಂದು ಜಮ್ಮು ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ ವಿ ಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ.

``ರಾಜೀನಾಮೆ ನೀಡಿರಿ ಇಲ್ಲವೇ ಸಾಯಿರಿ'' ಎಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಬೆದರಿಕೆಯೊಡ್ಡಿದ ಕೆಲವೇ ದಿನಗಳಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಕೊಂದ ಘಟನೆಯ ಬೆನ್ನಲ್ಲೇ ಪೊಲೀಸರ ರಾಜೀನಾಮೆ ವೀಡಿಯೊಗಳು ಹೊರಬಂದಿದ್ದವು. ಕಳೆದ ಶುಕ್ರವಾರದಿಮದ ರಾಜ್ಯದ  50ಕ್ಕೂ ಅಧಿಕ ಎಸ್‍ಪಿಒಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ರಾಜೀನಾಮೆ ನೀಡಿದ್ದಾರೆಂದು ಮೂಲಗಳು ಹೇಳಿವೆ.

ಆದರೆ ರಾಜೀನಾಮೆ ವೀಡಿಯೋಗಳನ್ನು ಅಲ್ಲಗಳೆದಿದ್ದ ಕೇಂದ್ರ, ಸದ್ಯ ಎಸ್‍ಪಿಒಗಳಾಗಿಲ್ಲದವರು ಇವರಾಗಿದ್ದಾರೆಂದು ಹೇಳಿತ್ತು. ಇಂತಹ ವೀಡಿಯೋಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದನ್ನು ತಡೆಯಲು  ಸರಕಾರ ದಕ್ಷಿಣ ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಗಳನ್ನು ಬ್ಲಾಕ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News