×
Ad

ಕೆನಡ ಸೌದಿಯನ್ನು ‘ಬನಾನ ರಿಪಬ್ಲಿಕ್’ನಂತೆ ಕಾಣುವುದನ್ನು ನಿಲ್ಲಿಸಬೇಕು: ಸೌದಿ ವಿದೇಶ ಸಚಿವ

Update: 2018-09-28 21:17 IST

ವಿಶ್ವಸಂಸ್ಥೆ, ಸೆ. 28: ಸೌದಿ ಅರೇಬಿಯದ ಮಹಿಳಾ ಹಕ್ಕುಗಳ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದಕ್ಕೆ ಕ್ಷಮೆ ಕೋರುವಂತೆ ಆ ದೇಶದ ವಿದೇಶ ಸಚಿವ ಆದಿಲ್ ಅಲ್-ಜುಬೇರ್ ಕೆನಡವನ್ನು ಕೇಳಿದ್ದಾರೆ.

ಅದೂ ಅಲ್ಲದೆ, ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡ ಬಯಸುವುದಾದರೆ, ಅದು ಸೌದಿ ಅರೇಬಿಯವನ್ನು ‘ಬನಾನ ರಿಪಬ್ಲಿಕ್’ (ಸದೃಢ ಸರಕಾರವಿಲ್ಲದ ಅವ್ಯವಸ್ಥಿತ ದೇಶ)ನಂತೆ ಕಾಣುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವಂತೆ ಒತ್ತಾಯಿಸಿರುವುದಕ್ಕಾಗಿ ಬಂಧಿಸಲ್ಪಟ್ಟಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಕೆನಡ ಸೌದಿ ಅರೇಬಿಯದ ಮೇಲೆ ಒತ್ತಡ ಹೇರಿತ್ತು.

ಇದರಿಂದ ಆಕ್ರೋಶಗೊಂಡ ಸೌದಿ ಅರೇಬಿಯ, ಆಗಸ್ಟ್‌ನಲ್ಲಿ ಕೆನಡದೊಂದಿಗಿನ ಹೊಸ ವ್ಯಾಪಾರವನ್ನು ಅಮಾನತಿನಲ್ಲಿಟ್ಟಿತು, ದವಸ ಧಾನ್ಯಗಳ ಆಮದನ್ನು ನಿಲ್ಲಿಸಿತು, ಕೆನಡದ ರಾಯಭಾರಿಯನ್ನು ಉಚ್ಚಾಟಿಸಿತು ಹಾಗೂ ಕೆನಡದಲ್ಲಿರುವ ಎಲ್ಲ ಸೌದಿ ವಿದ್ಯಾರ್ಥಿಗಳು ದೇಶಕ್ಕೆ ವಾಪಸಾಗುವಂತೆ ಆದೇಶ ನೀಡಿತು.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಧಿವೇಶನದ ನೇಪಥ್ಯದಲ್ಲಿ ಸೌದಿ ವಿದೇಶ ಸಚಿವರನ್ನು ಭೇಟಿಯಾಗುವ ಇಚ್ಛೆಯನ್ನು ಕೆನಡದ ವಿದೇಶ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಮಂಗಳವಾರ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News