ಒಡಿಶಾ ಬಗ್ಗೆ ಅವಮಾನಕ ಹೇಳಿಕೆ: ನ್ಯಾಯಪೀಠದ ಮುಂದೆ ಹಾಜರಾಗುವಂತೆ ಪತ್ರಕರ್ತನಿಗೆ ಸೂಚನೆ

Update: 2018-09-28 15:49 GMT

ಭುವನೇಶ್ವರ, ಸೆ.28: ಒಡಿಶಾ ರಾಜ್ಯ, ಅದರ ಪೂಜಾಸ್ಥಳಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಪತ್ರಕರ್ತ ಅಭಿಜಿತ್ ಐಯ್ಯರ್ ಮಿತ್ರರನ್ನು ಒಡಿಶಾ ವಿಧಾನಸಭೆ ರಚಿಸಿರುವ ಸಮಿತಿಯು ಹಾಜರಾಗುವಂತೆ ಸೂಚಿಸಿದೆ. ಮಿತ್ರರನ್ನು ಅಕ್ಟೋಬರ್ 11ರಂದು ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಸಮಿತಿಯ ಮುಖ್ಯಸ್ಥರಲ್ಲಿ ಒಬ್ಬರಾಗಿರುವ ವಿರೋಧ ಪಕ್ಷಗಳ ನಾಯಕ ನರಸಿಂಗ ಮಿಶ್ರಾ ತಿಳಿಸಿದ್ದಾರೆ. ಮಾಜಿ ಸಂಸದ ಬೈಜಯಂತ್ ಪಾಂಡ ಆಹ್ವಾನದ ಮೇರೆಗೆ ಐಯ್ಯರ್ ಸೆಪ್ಟಂಬರ್ 15ರಂದು ಒಡಿಶಾಗೆ ಆಗಮಿಸಿದ್ದರು. ಇಲ್ಲಿನ ಪುರಿ, ಕೊನಾರ್ಕ್ ಮತ್ತು ಚಿಲ್ಕ ಮುಂತಾದ ಪ್ರದೇಶಗಳಿಗೆ ತೆರಳಿದ ಐಯ್ಯರ್ ನಂತರ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ, ಅದರ ಸಂಸ್ಕೃತಿ ಮತ್ತು ಪರಂಪರೆ ಹಾಗೂ ಸಂಸದರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಐಯ್ಯರ್‌ನನ್ನು ಒಡಿಶಾ ಪೊಲೀಸರು ಸೆಪ್ಟಂಬರ್ 20ರಂದು ದಿಲ್ಲಿ ಪೊಲೀಸರ ಸಹಾಯದೊಂದಿಗೆ ಬಂಧಿಸಿದ್ದರು. ನಂತರ ದಿಲ್ಲಿ ನ್ಯಾಯಾಲಯ ಪತ್ರಕರ್ತನಿಗೆ ಒಂದು ಲಕ್ಷ ರೂ.ಬಾಂಡ್ ಮೇಲೆ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News