×
Ad

ಬಾಂಗ್ಲಾದೇಶದ ಶಾಕಿಬ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

Update: 2018-09-28 23:47 IST

ಢಾಕಾ, ಸೆ.28: ಏಶ್ಯಕಪ್‌ನ್ನು ಮೊಟಕುಗೊಳಿಸಿ ಯುಎಇಯಿಂದ ಸ್ವದೇಶಕ್ಕೆ ವಾಪಸಾದ ಬೆನ್ನಿಗೇ ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ದೀರ್ಘಸಮಯದಿಂದ ಕೈಬೆರಳಿನ ನೋವಿನಿಂದ ಬಳಲುತ್ತಿದ್ದ ಶಾಕಿಬ್ ದಿಢೀರನೇ ಸ್ವದೇಶಕ್ಕೆ ವಾಪಸಾದ ಕಾರಣ ಪಾಕಿಸ್ತಾನ ವಿರುದ್ಧ ಏಶ್ಯಕಪ್‌ನ ಸೂಪರ್-4 ಪಂದ್ಯ ಹಾಗೂ ಭಾರತ ವಿರುದ್ಧ ಫೈನಲ್ ಪಂದ್ಯದಿಂದ ವಂಚಿತರಾಗಿದ್ದರು.

‘‘ನನಗೆ ಕೈನೋವು ಉಲ್ಬಣಿಸಿದ ಕಾರಣ ಸ್ವದೇಶಕ್ಕೆ ವಾಪಸಾದೆ. ನಾನು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತೇನೆಂದು ಯೋಚಿಸಿರಲಿಲ್ಲ. ತಾಯ್ನಿಡಿಗೆ ವಾಪಸಾದ ಬಳಿಕ ಕೈನೋವು ಮತ್ತಷ್ಟು ಹೆಚ್ಚಾಯಿತು. ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಸೋಂಕಿತ ಕೀವ್‌ನ್ನು ವೈದ್ಯರು ನನ್ನ ಕೈ ಬೆರಳಿನಿಂದ ಹೊರ ತೆಗೆದಿದ್ದಾರೆ’’ ಎಂದು ಫೇಸ್‌ಬುಕ್‌ನಲ್ಲಿ ಶಾಕಿಬ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News