×
Ad

ಆಗ್ರಾದ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರ

Update: 2018-09-29 20:17 IST

ಲಕ್ನೊ, ಸೆ.29: ಆಗ್ರಾದ 26 ಶಾಲೆಗಳಲ್ಲಿ ಶೀಘ್ರವೇ ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಉತ್ತರಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ.

ರಜಸ್ವಲೆಯಾಗುವ ಪ್ರಕ್ರಿಯೆಯ ಬಗ್ಗೆ ಹುಡುಗಿಯರಲ್ಲಿ ಜಾಗೃತಿ ಮೂಡಿಸಿ ಈ ನೈಸರ್ಗಿಕ ವಿದ್ಯಮಾನದ ಕುರಿತು ಇರುವ ತಪ್ಪು ತಿಳುವಳಿಕೆಯನ್ನು ದೂರಗೊಳಿಸುವ ನಿಟ್ಟಿನಲ್ಲಿ ‘ನೈನ್’ ಎಂಬ ಸಮಾಜಸೇವಾ ಸಂಸ್ಥೆಯ ಸ್ಥಾಪಕ ಅಮರ್ ತುಲ್‌ಸಿಯ 

ಈ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಯಂತ್ರಗಳು ಈಗಾಗಲೇ ಶಾಲೆಗಳಿಗೆ ತಲುಪಿದ್ದು ಮಧ್ಯಾವಧಿ ಪರೀಕ್ಷೆಗಳು ಮುಕ್ತಾಯವಾದೊಡನೆ ಇವನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಅಲಹಾಬಾದ್, ವಾರಾಣಸಿ ಹಾಗೂ ಇತರ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ರಜಸ್ವಲೆಯಾಗುವ ಸಂದರ್ಭ ಅಗತ್ಯವಿರುವ ನೈರ್ಮಲ್ಯ ವಸ್ತುಗಳಿರುವ ಕಿಟ್‌ಗಳನ್ನು ಶೀಘ್ರವೇ ಒದಗಿಸಲಾಗುವುದು. ಈ ಕುರಿತು ರಾಜ್ಯ ಸರಕಾರದೊಂದಿಗೆ 80 ಕೋಟಿ. ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ನೈರ್ಮಲ್ಯ ವಸ್ತುಗಳ ಉತ್ಪಾದನಾ ಸಂಸ್ಥೆ ‘ಶುಧ್ ಪ್ಲಸ್’ನ ಸಿಇಒ ರಿಚಾ ಸಿಂಗ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News